ಅಲಹಾಬಾದ್ ಮೂಲದ ಪೇಂಟರ್ ಮಾರಿಸ್ ರೈಡರ್ (80) ಎಂಬಾತ ಮಹಿಳಾ ಸ್ನೇಹಿತೆಯೊಂದಿಗೆ ಸೆಕ್ಟರ್ 46ರಲ್ಲಿ ವಾಸಿಸು ತ್ತಿದ್ದ. ಈತನ ಜೊತೆ 17 ವರ್ಷದ ಬಾಲಕಿಯೂ ವಾಸಿಸುತ್ತಿದ್ದಳು. ಈ ಬಾಲಕಿ ಕಳೆದ 10 ವರ್ಷದಿಂದಲೂ ಈತನ ಮನೆಯಲ್ಲೇ ನೆಲೆಸಿದ್ದು, ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿ ದ್ದಳು.
ಆರೋಪಿಯು ತನ್ನ ಬೆರಳು, ಹೆಬ್ಬೆರಳು ಅಥವಾ ಕಾಲ್ಬೆರಳುಗಳನ್ನು ಬಾಲಕಿ ಯ ದೇಹದ ಖಾಸಗಿ ಭಾಗಗಳ ಸ್ಪರ್ಶಿಸುತ್ತಿದ್ದ. ಇದರಿಂದ ಬೇಸತ್ತ ಬಾಲಕಿ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ಮಾಡಿ ದೂರು ನೀಡಿದ್ದಾಳೆ.
ಡಿಜಿಟಲ್ ರೇಪ್ ಎಂದರೆ ಯಾವುದೇ ಹುಡುಗಿ ಅಥವಾ ಹುಡುಗ ಇಂಟರ್ನೆಟ್ ಮೂಲಕ ಶೋಷಣೆಗೆ ಒಳಗಾಗಬೇಕು ಎಂದೂ ಇಲ್ಲ. ಇಂಗ್ಲಿಷ್‌ನಲ್ಲಿ ಡಿಜಿಟ್ ಎಂದರೆ ಸಂಖ್ಯೆ ಎಂದರ್ಥ, ದೇಹದ ಕೆಲವು ಭಾಗಗಳನ್ನು ಸಂಖ್ಯೆಗಳಿಂದ ಗುರುತಿಸುತ್ತೇವೆ.
ಉದಾಹರಣೆಗೆ ಬೆರಳು, ಹೆಬ್ಬೆರಳು, ಕೈಬೆರಳು ಅಥವಾ ಕಾಲ್ಬೆರಳು ಸೇರಿದಂತೆ ದೇಹದ ಅಂಗಗಳನ್ನು ಎಣಿಸುವುದು, ಗುರುತಿಸುವು ದನ್ನು ಮಾಡುತ್ತೇವೆ. ಈ ಕೈಬೆರಳು ಮತ್ತು ಕಾಲ್ಬೆರಳುಗಳಿಂದ ಹೆಣ್ಮಕ್ಕಳ ಖಾಸಗಿ ಸ್ಥಳಗಳನ್ನು ಸ್ಪರ್ಶಿಸುವುದಕ್ಕೆ ಡಿಜಿಟಲ್ ರೇಪ್ ಎನ್ನಲಾಗಿದೆ.