ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಾನು ಭೇಟಿಯಾದ ‘ಒಳ್ಳೆಯ ವ್ಯಕ್ತಿಗಳಲ್ಲಿ’ ಒಬ್ಬರು ಆದರೆ ‘ಯಾರಾದರೂ ಭಾರತಕ್ಕೆ ಬೆದರಿಕೆ ಹಾಕಿದಾಗ ಸಂಪೂರ್ಣವಾಗಿ ಬದಲಾಗುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
“ಮೋದಿ ನನ್ನ ಸ್ನೇಹಿತ. ಅವರು ಶ್ರೇಷ್ಠ ವ್ಯಕ್ತಿ. ಅವರು ಬರುವುದಕ್ಕಿಂತ ಮೊದಲು ಭಾರತದ ನಿಲುವು ಅಸ್ಥಿರವಾಗಿತ್ತು. ಹೊರನೋಟಕ್ಕೆ, ಮೋದಿ ಕಠೋರವಾಗಿ ಕಾಣುತ್ತಾರೆ. ಅವರು ಒಳ್ಳೆಯ ವ್ಯಕ್ತಿ. ಆದರೆ ತಂಟೆಗೆ ಹೋದರೆ ಮಣಿಸುವುದು ಖಚಿತ ಎಂದು ಹಾಸ್ಯನಟರಾದ ಆಂಡ್ರ್ಯೂ ಶುಲ್ಜ್ ಮತ್ತು ಆಕಾಶ್ ಸಿಂಗ್ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಟೆಕ್ಸಾಸ್ ಹೂಸ್ಟನ್ನಲ್ಲಿ ನಡೆದ 2019 ರ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದನ್ನು ಅವರು ನೆನಪಿಸಿಕೊಂಡರು. ನರೇಂದ್ರ ಮೋದಿಯವರಿಗಾಗಿ ಕಿಕ್ಕಿರಿದ ಕ್ರೀಡಾಂಗಣವನ್ನು ನೋಡುವುದು ಸುಂದರ ಕ್ಷಣವಾಗಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Sanjay Dutt : 65ನೇ ವರ್ಷಕ್ಕೆ ಸಪ್ತಪದಿ ತುಳಿದ ನಟ ಸಂಜಯ್ ದತ್!
ಯಾರಾದರೂ ಭಾರತಕ್ಕೆ ಬೆದರಿಕೆ ಹಾಕಿದಾಗ ಪ್ರಧಾನಿ ಮೋದಿ ‘ಸಂಪೂರ್ಣ ಬದಲಾಗುತ್ತಾರೆ’ ಎಂದು ಟ್ರಂಪ್ ಇದೇ ವೇಳೆ ನುಡಿದರು.
ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷರಾಗಿದ್ದಾಗ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತು ಲಾಕ್ಡೌನ್ಗೆ ಒಳಗಾಗುವ ವಾರಗಳ ಮೊದಲು, 2020 ರಲ್ಲಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿತ್ತು.