ಅಹಮದಾಬಾದ್: ಗುಜರಾತ್‍ನ ಕಚ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 3.7 ತೀವ್ರತೆಯ ಭೂ ಕಂಪನದ ಅನುಭವವಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಕಂಪನದ ಕೇಂದ್ರಬಿಂದುವು ದುದೈನಿಂದ 19 ಕಿಮೀ ಉತ್ತರ-ಈಶಾನ್ಯಕ್ಕೆ 11.8 ಕಿಮೀ ಆಳದ ಲ್ಲಿದೆ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.
ಕಚ್ ಜಿಲ್ಲಾ ಅತ್ಯಂತ ಹೆಚ್ಚಿನ ಅಪಾಯದ ಭೂಕಂಪನ ವಲಯದಲ್ಲಿದೆ.ಕಳೆದ 2001ರಲ್ಲಿ ಇದೇ ವಲಯದಲ್ಲಿ ಸಂಭವಿಸದ ಭೀಕರ ಭೂ ಕಂಪನ ವಿನಾಶ ಸೃಷ್ಥಿಸಿತ್ತು.