ಕಛ್ : ಗುಜರಾತ್ ನ ಕಛ್ ಜಿಲ್ಲೆಯಲ್ಲಿ ಸೋಮವಾರ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಧಿನಗರ ಮೂಲದ ಭೂಕಂಪ ಶಾಸ್ತ್ರ ಸಂಶೋಧನಾ ಸಂಸ್ಥೆಯ (ಐಎಸ್ ಆರ್) ಪ್ರಕಾರ ಕಛ್ ಜಿಲ್ಲೆಯ ದುಧಾಯಿಯಿಂದ 13 ಕಿ.ಮೀ ಪೂರ್ವಈಶಾನ್ಯಕ್ಕೆ 13 ಕಿ.ಮೀ ದೂರದಲ್ಲಿ ಕಂಪನ ಉಂಟಾಗಿದೆ. 18.6 ಕಿ.ಮೀ ಆಳದಲ್ಲಿ ಭೂಕಂಪನ ದಾಖಲಾಗಿದೆ ಎಂದು ಐಎಸ್ ಆರ್ ತಿಳಿಸಿದೆ.
ಕಛ್ ಹೆಚ್ಚು ಅಪಾಯವಿರುವ ಭೂಕಂಪ ವಲಯದಲ್ಲಿದೆ. 2001ರ ಜನವರಿಯಲ್ಲಿ ಜಿಲ್ಲೆಯಲ್ಲಿ ಭೀಕರ ಭೂಕಂಪ ಸಂಭವಿಸಿದ ಘಟನೆ ನಡೆದಿತ್ತು.