Wednesday, 19th June 2024

ಪ್ರಯಾಣಿಕರಿಗೆ ಎದೆನೋವು: ವಿಮಾನ ತುರ್ತು ಭೂಸ್ಪರ್ಶ

ಚೆನ್ನೈ: ಪ್ರಯಾಣಿಕರೊಬ್ಬರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೌಲಾಲಂಪುರಕ್ಕೆ ತೆರಳುತ್ತಿದ್ದ ಮಲೇಶಿಯಾ ಮೂಲದ ಅಂತಾರಾಷ್ಟ್ರೀಯ ವಿಮಾನ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಜೆಡ್ಡಾದಿಂದ 280 ಪ್ರಯಾಣಿಕರನ್ನು ಕೌಲಾಲಂಪುರಕ್ಕೆ ಸಾಗಿಸುತ್ತಿದ್ದ ವಿಮಾನ ಚೆನ್ನೈ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲು ಅನುಮತಿ ನೀಡುವಂತೆ ವಿಮಾನದ ಪೈಲಟ್ ಮಾಡಿಕೊಂಡ ಮನವಿಗೆ ಕ್ಲಿಯರೆನ್ಸ್ ದೊರೆಯುತ್ತಿದ್ದಂತೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.

ಪ್ರಯಾಣಿಕರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

error: Content is protected !!