Saturday, 27th July 2024

ಹಿಮಾಚಲ ಪ್ರದೇಶ ಚುನಾವಣೆಯ ಮತದಾನ ಆರಂಭ

ಶಿಮ್ಲಾ: ವಿದ್ಯುನ್ಮಾನ ಮತಯಂತ್ರಗಳು ಪರಿಶೀಲಿಸಲು ಅಧಿಕಾರಿಗಳು ಎಲ್ಲಾ ಮತಗಟ್ಟೆಗಳಲ್ಲಿ ಅಣಕು ಮತದಾನ ನಡೆಸಿದ ನಂತರ ನಿರ್ಣಾಯಕ ಹಿಮಾಚಲ ಪ್ರದೇಶ ಚುನಾವಣೆಯ ಮತದಾನ ಶನಿವಾರ ನಿಧಾನಗತಿಯಲ್ಲಿ ಪ್ರಾರಂಭವಾಯಿತು.
ಮೊದಲ ಗಂಟೆಯಲ್ಲಿ ಕೇವಲ ಶೇ.4ರಷ್ಟು ಮತದಾನವಾಗಿದೆ ಎಂದು ಚುನಾ ವಣಾ ಆಯೋಗದ ಮೂಲಗಳು ತಿಳಿಸಿವೆ.
55 ಲಕ್ಷಕ್ಕೂ ಹೆಚ್ಚು ಮತದಾರರು 68 ವಿಧಾನಸಭಾ ಕ್ಷೇತ್ರಗಳಲ್ಲಿ 412 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಈ ಬಾರಿ 24 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟು ಮತದಾರರಲ್ಲಿ 28,54,945 ಪುರುಷ ಹಾಗೂ 27,37,845 ಮಹಿಳಾ ಮತದಾರರಿದ್ದಾರೆ.

ಹಿಮಾಚಲ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮನೀಶ್ ಗರ್ಗ್, ಮತದಾನಕ್ಕೆ ಎಲ್ಲಾ ವ್ಯವಸ್ಥೆಗಳು ಜಾರಿಯಲ್ಲಿವೆ. ಮತಗಟ್ಟೆ ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸುಮಾರು 50,000 ಮತಗಟ್ಟೆ ಸಿಬ್ಬಂದಿ ಮತ್ತು ಸುಮಾರು 25,000 ಭದ್ರತಾ ಸಿಬ್ಬಂದಿ ನಿಯೋಜಿಸ ಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗವು ದೂರದ ಪ್ರದೇಶಗಳಲ್ಲಿ ಮೂರು ಸಹಾಯಕ ಮತದಾನ ಕೇಂದ್ರಗಳು ಸೇರಿದಂತೆ 7,884 ಮತಗಟ್ಟೆ ಗಳನ್ನು ಹೊಂದಿದೆ. ಇವುಗಳಲ್ಲಿ 789 ದುರ್ಬಲ ಬೂತ್ಗಳು ಮತ್ತು 397 ನಿರ್ಣಾಯಕವಾಗಿವೆ.

error: Content is protected !!