Thursday, 19th September 2024

ನವದೆಹಲಿಯಲ್ಲಿ ಮಾಸ್ಕ್ ರಹಿತ ದಂಡ ₹ 500 ವಾಪಸ್‌

ವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದಕ್ಕಾಗಿ ದೆಹಲಿ ವಿಪತ್ತು ನಿರ್ವ ಹಣಾ ಪ್ರಾಧಿಕಾರ ₹ 500 ದಂಡವನ್ನು ಹಿಂಪಡೆಯಲು ಸಜ್ಜಾಗಿದೆ ಎಂದು ಬುಧವಾರ ವರದಿಯಾಗಿದೆ.

ನವೆಂಬರಿನಲ್ಲಿ ಮಾಸ್ಕ್ ರಹಿತ ದಂಡವು ₹ 2,000 ರಷ್ಟಿತ್ತು. ನಂತರ ಫೆಬ್ರವರಿಯಲ್ಲಿ ₹ 500 ಕ್ಕೆ ಇಳಿಸಲಾಯಿತು. ದೈನಂದಿನ ಸೋಂಕುಗಳು ಸಾಕಷ್ಟು ಕಡಿಮೆ ಇರುವುದರಿಂದ ಸಾರ್ವ ಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದಕ್ಕಾಗಿ ದೆಹಲಿ ಸರ್ಕಾರ ಏಪ್ರಿಲ್ 2 ರಂದು ₹ 500 ರ ದಂಡವನ್ನು ತೆಗೆದು ಹಾಕಿತ್ತು.‌

ಏಪ್ರಿಲ್ 11 ಮತ್ತು ಏಪ್ರಿಲ್ 18 ರ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳ ಕಂಡುಬಂದಿದ್ದರಿಂದ ಮೂರು ವಾರ ಗಳಲ್ಲಿ ದಂಡವನ್ನು ಮತ್ತೆ ವಿಧಿಸಲಾಯಿತು.

ಅಕ್ಟೋಬರ್ 2 ಕ್ಕೆ ಕೊನೆಗೊಂಡ ವಾರದಲ್ಲಿ, ಭಾರತವು 26,300 ಕ್ಕೂ ಹೆಚ್ಚು ಹೊಸ ಸೋಂಕುಗಳಿಗೆ ಸಾಕ್ಷಿಯಾಗಿದೆ.