Friday, 18th October 2024

ಕಾನೂನ ಬಾಹಿರ ಮದರಸಾ: ಮೌಲ್ವಿಯ ಬಂಧನ

ಗಾಝಿಯಾಬಾದ್: ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸಾ ನಡೆಸುವ ಶೌಕತ್ ಅಲಿ ಎಂಬ ಮೌಲ್ವಿಯನ್ನು ಗಾಝಿಯಾ ಬಾದ್ ಪೋಲಿಸರು ಬಂಧಿಸಿದ್ದಾರೆ.

ಗಾಝಿಯಾಬಾದದ ಖೋಡಾ ಪರಿಸರದಲ್ಲಿನ ದೀಪಕ ವಿಹಾರ ಪ್ರದೇಶದಲ್ಲಿ ಶೌಕಾತ್ ಅಲಿ ಎಂಬ ಮೌಲ್ವಿ ‘ಫ್ಯೂಚರ್ ಟ್ರ್ಯಾಕ್’ ಹೆಸರಿನ ಪ್ರಶಿಕ್ಷಣ ಸಂಸ್ಥೆ ನಡೆಸುತ್ತಿದ್ದನು. ಈ ಸಂಸ್ಥೆಯ ರೂಪಾಂತರ ಮದರಸಾದಲ್ಲಿ ಆಯಿತು. ದೀಪಕ ವಿಹಾರ ಪರಿಸರದಲ್ಲಿ ವಾಸಿ ಸುವ ಹಿಂದುಗಳು ಈ ಮದರಸದಲ್ಲಿ ನಡೆಯುವ ನಮಾಜ್ ಗೆ ವಿರೋಧಿಸಿದ್ದರು.

ದೀಪಕ ವಿಹಾರದಲ್ಲಿ ಪ್ರೇಮ ಸಿಂಹ ಎಂಬವರು ಈ ಕಾನೂನ ಬಾಹಿರ ಮದರಸಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸ ಪಡೆ ದೀಪಕ ವಿಹಾರ ಪರಿಸರದಲ್ಲಿ ಗಸ್ತು ಹಾಕುತ್ತಿರುವಾಗ ಈ ಸಂಸ್ಥೆಯ ಹತ್ತಿರ ಪೊಲೀಸರಿಗೆ ಗದ್ದಲ ಕಾಣಿಸಿತು. ಈ ಗುಂಪು ನಮಾಜ್ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತು. ಮೌಲ್ವಿಯ ಈ ಕೃತ್ಯ ಸಾಮಾಜಿಕ ಸೌಹಾರ್ದ ಹದಗೆಡೆಸು ವುದಾಗಿದೆ ಮತ್ತು ಎರಡು ಸಮುದಾಯದಲ್ಲಿ ಬಿರುಕು ಮೂಡಿಸುವದಾಗಿದೆ ಎಂದು ಪೊಲೀಸರು ಮೌಲ್ವಿ ವಿರುದ್ಧ ದೂರು ದಾಖಲಿಸಿ ಅವನನ್ನು ಬಂಧಿಸಿದರು.