Monday, 25th November 2024

100 ಗಂಟೆಗಳಲ್ಲಿ 100 ಕಿ.ಮೀ ರಸ್ತೆ ನಿರ್ಮಾಣ ಪೂರ್ಣ…!

ವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್-ಅಲಿಗಢ ಎಕ್ಸ್ಪ್ರೆಸ್ವೇಯಲ್ಲಿ 100 ಗಂಟೆ ಗಳಲ್ಲಿ 100 ಕಿ.ಮೀ ರಸ್ತೆಯನ್ನ ನಿರ್ಮಿಸುವ ಕೆಲಸ ಪೂರ್ಣಗೊಂಡಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ದಾಖಲೆ ಬರೆದಿದೆ.

100 ಗಂಟೆಗಳಲ್ಲಿ 112 ಕಿ.ಮೀ ದೂರವನ್ನ ಕ್ರಮಿಸಿ ವಿಶ್ವದಾಖಲೆ ನಿರ್ಮಿಸಲಾಗಿದೆ. ಈ ಹಿಂದೆ 105 ಗಂಟೆಗಳಲ್ಲಿ 75 ಕಿಲೋ ಮೀಟರ್ ದೂರ ಕ್ರಮಿಸಿ ದಾಖಲೆ ನಿರ್ಮಿಸಲಾಗಿತ್ತು. ಗಾಜಿಯಾಬಾದ್-ಅಲಿಗಢ ಎಕ್ಸ್ಪ್ರೆಸ್ವೇಯನ್ನ ಮೇ 15 ರಂದು ಬೆಳಿಗ್ಗೆ ಉದ್ಘಾಟಿಸಲಾಗಿದ್ದು, ಶನಿವಾರ ಮಧ್ಯಾಹ್ನ 2 ಗಂಟೆಗೆ 100 ಗಂಟೆಗಳನ್ನ ಪೂರ್ಣಗೊಳಿಸಿತು. ಇದು 6 ಪಥದ ಎಕ್ಸ್ ಪ್ರೆಸ್ ವೇ ಆಗಿದೆ.

ಗಾಜಿಯಾಬಾದ್-ಅಲಿಗಢ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕಾಗಿ ಆರು ಹಾಟ್ಮಿಕ್ಸ್ ಸ್ಥಾವರಗಳು, 15 ಸೆನ್ಸರ್ ಪೇವರ್ಗಳು ಮತ್ತು 2000 ಜನರನ್ನು ನೇಮಿಸಲಾಗಿದೆ. ಇದಲ್ಲದೆ, 250 ಎಂಜಿನಿ ಯರ್’ಗಳು ಈ ಎಕ್ಸ್ಪ್ರೆಸ್ವೇ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.  ಒಟ್ಟು 2250 ಉದ್ಯೋಗಿಗಳು ಮತ್ತು ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆ.