Wednesday, 26th June 2024

ಅರುಣಾಚಲ ಪ್ರದೇಶ: ಸೇನಾ ಹೆಲಿಕಾಪ್ಟರ್ ಪತನ

ಗುವಾಹಟಿ: ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಶುಕ್ರವಾರ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಟುಟಿಂಗ್ ಬಳಿಯ ಮಿಗ್ಗಿಂಗ್ ನಲ್ಲಿ ಈ ಘಟನೆ ಸಂಭವಿಸಿದೆ. ಪ್ರಸ್ತುತ ಘಟನಾ ಪ್ರದೇಶಕ್ಕೆ ದೌಡಾ ಯಿಸಿರುವ ರಕ್ಷಣಾ ಸಿಬ್ಬಂದಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್ ಪ್ರದೇಶದ ಬಳಿ ಪತನಗೊಂಡಿದೆ ಎಂದು ರಕ್ಷಣಾ PRO, ಗುವಾಹಟಿ ತಿಳಿಸಿದ್ದಾರೆ.

ಕಾಪ್ಟರ್ ಪತನವಾದ ವಿಡಿಯೋವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ಅಪಘಾತದ ಸ್ಥಳವನ್ನು ರಸ್ತೆಯ ಮೂಲಕ ಸಂಪರ್ಕಿಸಲಾಗಿಲ್ಲ. ರಕ್ಷಣಾ ತಂಡಗಳು ಘಟನಾ ಪ್ರದೇಶಕ್ಕೆ ಧಾವಿಸುತ್ತಿದ್ದು, ಇತರ ಎಲ್ಲಾ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 5 ರಂದು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಬಳಿ ಚೀತಾ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ಸೇನಾ ಪೈಲಟ್ ಗಳು ಪ್ರಾಣ ಕಳೆದುಕೊಂಡಿದ್ದರು. ತವಾಂಗ್ ಬಳಿಯ ಫಾರ್ವರ್ಡ್ ಪ್ರದೇಶಗಳಲ್ಲಿ ಹಾರುತ್ತಿದ್ದ ಚೀತಾ ಹೆಲಿ ಕಾಪ್ಟರ್  ದಿನನಿತ್ಯದ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿತ್ತು.

 

error: Content is protected !!