Wednesday, 11th December 2024

‘ಮೀಡಿಯಾ ಒನ್’ ಪ್ರಸಾರ ನಿಷೇಧ ಆದೇಶಕ್ಕೆ ಸುಪ್ರೀಂ ’ತಡೆ’

ನವದೆಹಲಿ: ಮಲಯಾಳಂ ಸುದ್ದಿವಾಹಿನಿ ‘ಮೀಡಿಯಾ ಒನ್’ ಪ್ರಸಾರ ನಿಷೇಧಿ ಸುವ ಕೇಂದ್ರದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರ ಪೀಠವು ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಚಾನೆಲ್ ಪ್ರಸಾರವನ್ನು ನಿಷೇಧಿಸುವ ಮೊದಲು ಕಾರ್ಯನಿರ್ವಹಿಸು ತ್ತಿದ್ದಂತೆಯೇ ತನ್ನ ಕಾರ್ಯಾಚರಣೆ ಯನ್ನು ಮುಂದುವರಿಸುತ್ತದೆ ಎಂದು ಹೇಳಿದೆ.

ಹೈಕೋರ್ಟ್ ಆದೇಶದ ವಿರುದ್ಧ ಚಾನೆಲ್ ಸಲ್ಲಿಸಿರುವ ಮೇಲ್ಮನವಿಗಳ ಕುರಿತು ಮಾ.26 ರೊಳಗೆ ವಿವರವಾದ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಹೇಳಿದೆ. ಮಾ.10 ರಂದು, ಭದ್ರತಾ ಕಾರಣಗಳಿಗಾಗಿ ಅದರ ಪ್ರಸಾರ ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿಯುವ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಚಾನೆಲ್ ಮಾಡಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು.