Saturday, 27th July 2024

ಚಂಡೀಗಢ ವಿವಿ ಪ್ರಕರಣ: ಹಾಸ್ಟೆಲ್ ವಾರ್ಡನ್ ಅಮಾನತು, ವಿವಿಗೆ ಬೀಗ

ವದೆಹಲಿ : ಚಂಡೀಗಢ ವಿಶ್ವವಿದ್ಯಾಲಯ ಆಡಳಿತವು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಾಲಕಿಯರ ಹಾಸ್ಟೆಲ್ ವಾರ್ಡನ್ ರಾಜ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿದೆ. ವಿಶ್ವವಿದ್ಯಾ ಲಯವನ್ನು ಶನಿವಾರದವರೆಗೆ ಮುಚ್ಚಲಾಗಿದೆ.

ಚಂಡೀಗಢ ವಿಶ್ವವಿದ್ಯಾನಿಲಯದ ಬಾಲಕಿಯರ ಹಾಸ್ಟೆಲ್‌ನಿಂದ ಆಕ್ಷೇಪಾರ್ಹ ವಿಡಿಯೋಗಳು ಸೋರಿಕೆಯಾಗಿರುವ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ನಡೆಸಿದರು.

ತನ್ನ ಪ್ರಿಯಕರನಿಗೆ ವಿಡಿಯೋ ಕಳುಹಿಸಿದ್ದಾಳೆ ಎಂದು ಆರೋಪಿಸಲಾದ ಬಂಧಿತ ಯುವತಿಯನ್ನು ಹಾಸ್ಟೆಲ್‍ ವಾರ್ಡನ್‍ ಎದುರಿಸುತ್ತಿರುವ ವೈರಲ್‍ ವಿಡಿಯೋದಲ್ಲಿ ಕಂಡುಬಂದಿದೆ. ಈ ವಿಷಯದ ಬಗ್ಗೆ ಪೊಲಿಸರಿಗೆ ತಿಳಿಸಿಲ್ಲ ಎಂದು ವರದಿಯಾಗಿದೆ.

error: Content is protected !!