Saturday, 14th December 2024

Naga-Samantha : ನಾಗಚೈತನ್ಯ- ಸಮಂತಾ ಡಿವೋರ್ಸ್‌ಗೆ ತೆಲಂಗಾಣ ಸಚಿವ ಕಾರಣ? ಭಾರಿ ವಿವಾದ

Naga-Samantha

ಹೈದರಾಬಾದ್: ನಟರಾದ ನಾಗಚೈತನ್ಯ ಮತ್ತು ಸಮಂತಾ ಋತ್ ಪ್ರಭು (Naga-Samantha) ಅವರ ವಿಚ್ಛೇದನ, ಡ್ರಗ್ಸ್ ಮತ್ತು ಬ್ಲ್ಯಾಕ್‌ಮೇಲ್‌ನಿಂದಾಗಿದ್ದು ಅದಕ್ಕೆ ಭಾರತ ರಾಷ್ಟ್ರ ಸಮಿತಿ ಮುಖಂಡ ಕೆ.ಟಿ. ರಾಮರಾವ್ ಕಾರಣ ಎಂದೂ ತೆಲಂಗಾಣದ ಅರಣ್ಯ ಸಚಿವೆ ಕೊಂಡಾ ಸುರೇಖಾ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ನಾಗಚೈತನ್ಯ ಅವರ ತಂದೆ ಹಿರಿಯ ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಸಚಿವರ ಹೇಳಿಕೆ “ಸಂಪೂರ್ಣ ಅಪ್ರಸ್ತುತ ಮತ್ತು ಸುಳ್ಳು” ಎಂದು ಹೇಳಿದ್ದಾರೆ. ಅವರು ಅವುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕೊಂಡಾ ಸುರೇಖಾ ಅವರ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಿಮ್ಮ ವಿರೋಧಿಗಳನ್ನು ಟೀಕಿಸಲು ರಾಜಕೀಯದಿಂದ ದೂರವಿರುವ ಚಲನಚಿತ್ರ ತಾರೆಯರ ಹೆಸರನ್ನು ದುರ್ಬಳಕೆ ಮಾಡಬೇಡಿ. ಬೇರೆ ಜನರ ಖಾಸಗಿತನ ಕಾಪಾಡಿ ಎಂದು ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳೆಯಾಗಿ, ನಮ್ಮ ಕುಟುಂಬದ ವಿರುದ್ಧ ನಿಮ್ಮ ಟೀಕೆಗಳು ಮತ್ತು ಆರೋಪಗಳು ಸಂಪೂರ್ಣವಾಗಿ ಅಪ್ರಸ್ತುತ ಮತ್ತು ಸುಳ್ಳು. ನಿಮ್ಮ ಹೇಳಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕೆಟಿಆರ್‌ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಅವರ ಪಕ್ಷದ ಮುಖಂಡ ಮತ್ತು ಮಾಜಿ ಸಚಿವ ಹರೀಶ್ ರಾವ್ ತನ್ನೀರು ಅವರು ಕಾಂಗ್ರೆಸ್ ನಾಯಕ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: MS Dhoni: ಧೋನಿ ಐಪಿಎಲ್‌ ಭವಿಷ್ಯದ ಬಗ್ಗೆ ಮಹತ್ವದ ಕೇಳಿಕೆ ಕೊಟ್ಟ ಫ್ರಾಂಚೈಸಿ ಸಿಇಒ

ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ಕೆ.ಟಿ.ರಾಮರಾವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸುರೇಖಾ, ಅನೇಕ ನಟಿಯರು ಚಿತ್ರರಂಗವನ್ನು ತೊರೆದು ಬೇಗನೆ ಮದುವೆಯಾಗಲು ಅವರು ಕಾರಣ ಎಂದು ಹೇಳಿದ್ದಾರೆ. ಕೆ.ಟಿ.ರಾಮರಾವ್ ಅವರು ಚಲನಚಿತ್ರ ಕ್ಷೇತ್ರದ ವ್ಯಕ್ತಿಗಳನ್ನು ಮಾದಕವಸ್ತು ವ್ಯಸನಿಗಳನ್ನಾಗಿ ಮಾಡಿ ಬಳಿಕ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ.

ಆರೋಪಗಳಿಗೆ ಕಾರಣವೇನು?

ಸುರೇಖಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಬಂದಿದ್ದವು. ಕಾರ್ಯಕ್ರಮವೊಂದರಲ್ಲಿ ಬಿಜೆಪಿ ನಾಯಕ ಮತ್ತು ಮೇಡಕ್ ಸಂಸದ ರಘುನಂದನ್ ರಾವ್ ಅವರು ಅವರ ಕೊರಳಿಗೆ ಹಾರ ಹಾಕುತ್ತಿರುವ ಫೋಟೋ ವೈರಲ್ ಮಾಡಲಾಗಿತ್ತು. ಇದರಿಂದ ಕೋಪಗೊಂಡಿರುವ ಅವರು ಇದರ ಹಿಂದೆ ಬಿಆರ್‌ಎಸ್‌ ಕೈವಾಡ ಇದೆ ಎಂದ ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಸಮಂತಾ ರುತ್ ಪ್ರಭು ಅವರೊಂದಿಗೆ ಬೇರ್ಪಟ್ಟ ನಾಗ ಚೈತನ್ಯ ಆಗಸ್ಟ್ ನಲ್ಲಿ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.