Thursday, 19th September 2024

IBPS RRB Prelims Exam : ಐಬಿಪಿಎಸ್‌ ಆರ್‌ಆರ್‌ಬಿ ಪ್ರಿಲಿಮ್ಸ್ ಫಲಿತಾಂಶ ಪ್ರಕಟ

IBPS RRB Prelims Exam 2024

ನವದೆಹಲಿ: ಇನ್‌ಸ್ಟಿಟ್ಯೂಟ್ ಆಫ್‌ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಇಂದು ಐಬಿಪಿಎಸ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB ) ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆ 2024 ರ ಫಲಿತಾಂಶವನ್ನು (IBPS RRB Prelims Exam) ತನ್ನ ಅಧಿಕೃತ ವೆಬ್ಸೈಟ್ ibps.in ನಲ್ಲಿ ಪ್ರಕಟಿಸಿದೆ. ಗ್ರೂಪ್ ಎ ಆಫೀಸರ್ಸ್ ಸ್ಕೇಲ್ -1 ಗಾಗಿ ಐಬಿಪಿಎಸ್ ಆರ್‌ಆರ್‌ಬಿ 2024ರ ಪ್ರಿಲಿಮ್ಸ್ ಪರೀಕ್ಷೆಯನ್ನು ಆಗಸ್ಟ್ 10, 17 ಮತ್ತು 18 ರಂದು ನಡೆಸಲಾಗಿತ್ತು. ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 29 ರಂದು ನಡೆಸುವ ಸಾಧ್ಯತೆಯಿದೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಫಲಿತಾಂಶಗಳನ್ನು ಈ ರೀತಿ ಪರಿಶೀಲಿಸಿ

ಹಂತ 1: ಅಧಿಕೃತ ವೆಬ್‌ಸೈಟ್‌ ibps.in.ಗೆ ಓಪನ್ ಮಾಡಿ.

ಹಂತ 2: ಮುಖಪುಟದಲ್ಲಿ, ನೋಟಿಫಿಕೇಷನ್‌ ಅಡಿಯಲ್ಲಿ ಅಥವಾ ಹೊಸ ವಿಭಾಗದ ಅಡಿಯಲ್ಲಿ, ಅಭ್ಯರ್ಥಿಗಳು ಐಬಿಪಿಎಸ್ ಆರ್‌ಆರ್‌ಬಿ ಪ್ರಿಲಿಮ್ಸ್ ಫಲಿತಾಂಶ 2024 ರ ಲಿಂಕ್ ಅನ್ನು ನೋಡಿ.

ಹಂತ 3: ಲಿಂಕ್ ಅನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಲಾಗಿನ್ ಮಾಹಿತಿಗಳನ್ನು ನಮೂದಿಸಿ.

ಹಂತ 4: ಅಭ್ಯರ್ಥಿಯ ಅಂಕಗಳನ್ನು ಸ್ಕ್ರೀನ್‌ ಮೇಲೆ ಬರುತ್ತದೆ.

ಹಂತ 5: ಅಭ್ಯರ್ಥಿಯು ಭವಿಷ್ಯದ ಉದ್ದೇಶಕ್ಕೆ ಅದನ್ನು ಪ್ರಿಂಟ್ ಮಾಡಬಹುದು.

ಅರ್ಹ ಅಭ್ಯರ್ಥಿಗಳು ಈಗ ಐಬಿಪಿಎಸ್ ಆರ್‌ಆರ್‌ಬಿ ಮುಖ್ಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಅಂತಿಮ ಫಲಿತಾಂಶವು ಮುಖ್ಯ ಪರೀಕ್ಷೆ ಮತ್ತು ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್) ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ: Village administrative officer: ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ

ಪರೀಕ್ಷೆಯ ನೇಮಕಾತಿ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ. ಐಬಿಪಿಎಸ್ ಕ್ಲರ್ಕ್ ಹುದ್ದೆಗೆ ಅಭ್ಯರ್ಥಿಗಳನ್ನು ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಐಬಿಪಿಎಸ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್‌ಆರ್‌ಬಿ ) ಗ್ರೂಪ್ ಎ-ಆಫೀಸರ್ (ಸ್ಕೇಲ್ 1, 2 ಮತ್ತು 3) ಮತ್ತು ಗ್ರೂಪ್ ಬಿ ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಡ್ರೈವ್ ನಡೆಸುತ್ತಿದೆ.

Leave a Reply

Your email address will not be published. Required fields are marked *