ಬಾಲಿವುಡ್ ನಟಿ ಇಲಿಯಾನಾ ಡಿ’ಕ್ರೂಜ್(Ileana D’Cruz) ಆಗಾಗ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇಲಿಯಾನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅಭಿಮಾನಿಗಳ ಪ್ರಶ್ನೆಗಳಿಗೆ ಆಗಾಗ ಉತ್ತರಿಸುತ್ತಿರುತ್ತಾರೆ. ಇತ್ತೀಚೆಗೆ ಇಲಿಯಾನಾ ಡಿ’ಕ್ರೂಜ್ ಅವರ ಚಾಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರಲ್ಲಿ ಬಾಲಿವುಡ್ ನಟಿ ಇಲಿಯಾನಾ ಡಿ ಕ್ರೂಜ್ ಅವರನ್ನು ಅಭಿಮಾನಿಯೊಬ್ಬರು ಪಿರಿಯಡ್ ದಿನಗಳಲ್ಲಿ ಭಾವಿ ಪತ್ನಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಸಲಹೆಗಳನ್ನು ಕೇಳಿದ್ದು, ಅದಕ್ಕೆ ನಟಿ ಸಲಹೆ ನೀಡಿದ್ದಾರೆ. ಈ ಚಾಟ್ ಹೆಚ್ಚಿನ ಜನರ ಗಮನ ಸೆಳೆದಿದೆ.
ಋತುಚಕ್ರದ ಸಮಯದಲ್ಲಿ ಮಹಿಳೆಯರ ಮನಸ್ಥಿತಿಯ ಕುರಿತು ತಿಳಿಸುವ ಮೆಮ್ ಅನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದು, “ನಾನು ನನ್ನ ಭಾವಿ ಪತ್ನಿಯೊಂದಿಗೆ ಈ ರೀತಿಯ ಪರಿಸ್ಥಿತಿಯಲ್ಲಿದ್ದರೆ ಏನು ಮಾಡಬೇಕು? ನನಗೆ ಸಹಾಯ ಮಾಡಿ, ನಾನು ಅವರನ್ನು ನೋಯಿಸಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
ಅಭಿಮಾನಿಯ ಈ ಪ್ರಶ್ನೆಗೆ ಉತ್ತರಿಸಿದ ಇಲಿಯಾನಾ ಡಿ’ಕ್ರೂಜ್, ಅವರ ಬಳಿ ಹೋಗಿ, ಖುಷಿಯಿಂದ ಅಪ್ಪಿಕೊಳ್ಳಿ. ಆಗ ಅವರು ಸಿಟ್ಟಾದರೆ ಅವರ ಬಳಿ ನಿಲ್ಲಬೇಡಿ. ಅವರ ಮೇಲೆ ಚಾಕೊಲೇಟ್ ಎಸೆದು ಓಡಿಹೋಗಿ ಎಂದಿದ್ದಾರೆ. ಇಲಿಯಾನ ಅವರ ಈ ಉತ್ತರ ಓದಿ ಸೋಷಿಯಲ್ ಮೀಡಿಯಾ ಅಭಿಮಾನಿಗಳು ಚರ್ಚಿಸಿದ್ದಾರೆ.
ಇಲಿಯಾನಾ ಡಿʼಕ್ರೂಜ್ ಮದುವೆಯಾಗದೆ ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ, ಅವರು ಬೇಬಿಮೂನ್ನಲ್ಲಿದ್ದಾಗ, ಅವರು ರಹಸ್ಯ ವ್ಯಕ್ತಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರ ಮುಖ ಸ್ಪಷ್ಟವಾಗಿ ಕಾಣಲಿಲ್ಲ. ಮದುವೆಯಿಲ್ಲದೆ ತಾಯಿಯಾಗಿದ್ದಕ್ಕಾಗಿ ಇಲಿಯಾನಾ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು.
ಇದನ್ನೂ ಓದಿ: ರೀಲ್ಸ್ ಕ್ರೇಜ್… ಆಸ್ಪತ್ರೆಯ ಹೊರಗೆ ಎಮ್ಮೆ ಸವಾರಿ ಮಾಡಿದ ಯೂಟ್ಯೂಬರ್! ಮುಂದೆ ಆಗಿದ್ದೇನು? ವಿಡಿಯೊ ನೋಡಿ
ಇಲಿಯಾನಾ ಅವರ ವೃತ್ತಿ ಬದುಕಿನ ಬಗ್ಗೆ ಮಾತನಾಡುವುದಾದರೆ, ಅವರು ಮುಂದಿನ ‘ದೋ ಔರ್ ದೋ ಪ್ಯಾರ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ವಿದ್ಯಾ ಬಾಲನ್ ಕೂಡ ನಟಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಅವರು ತಮ್ಮ ಸಂಗಾತಿ ಮತ್ತು ಮಗನೊಂದಿಗೆ ಭಾರತಕ್ಕೆ ಬರಬಹುದು. ಇದಲ್ಲದೆ, ಅವರು ರಣದೀಪ್ ಹೂಡಾ ಅವರೊಂದಿಗೆ ಅನ್ಫೇರ್ ಅಂಡ್ ಲವ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.