Tuesday, 3rd December 2024

ಇದು ಆನಂದದಾಯಕ ಕ್ಷಣ

ದೆಹಲಿ: ಅಯೋಧ್ಯೆೆ ರಾಮ ಜನ್ಮಭೂಮಿ-ಬಾಬ್ರಿಿ ಮಸೀದಿ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಶನಿವಾರ ನೀಡಿರುವ ತೀರ್ಪನ್ನು, ಸುಮಾರು ಮೂರು ದಶಕಗಳ ಹಿಂದೆ ರಾಮ ಮಂದಿರ ರಥಯಾತ್ರೆೆಯ ನೇತೃತ್ವ ವಹಿಸಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಾಣಿ ಸ್ವಾಾಗತಿಸಿದ್ದಾರೆ.
ಶನಿವಾರ ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಿಯಿಸಿದ ಅವರು, ಇದು ಬಹಳ ಆನಂದದಾಯಕ ಕ್ಷಣ. ರಾಮ ಮಂದಿರ ಆಂದೋಲನದಲ್ಲಿ ಭಾಗವಹಿಸುವ ಅವಕಾಶವನ್ನು ದೇವರು ತಮಗೆ ಕಲ್ಪಿಿಸಿದ್ದ. ದೇಶದಲ್ಲಿ ಸ್ವಾಾತಂತ್ರ್ಯ ಹೋರಾಟದ ನಂತರ ಅಯೋಧ್ಯೆೆ ರಾಮಮಂದಿರ ಆಂದೋಲನ ಅತಿದೊಡ್ಡ ಚಳವಳಿಯಾಗಿತ್ತು. ಅದರಲ್ಲಿ ಭಾಗಿಯಾಗಿದ್ದು ನನಗೆ ಹೆಮ್ಮೆೆ ಎನಿಸುತ್ತದೆ. ಸುದೀರ್ಘ ಹೋರಾಟಕ್ಕೆೆ ಸುಪ್ರೀಂ ಕೋರ್ಟ್ ತೀರ್ಪು ಸೂಕ್ತ ಪ್ರತಿಫಲದಂತಿದೆ’ ಎಂದು ಹೇಳಿದ್ದಾರೆ.