Tuesday, 26th November 2024

ತಂದೆಯಿಂದಲೇ ಅತ್ಯಾಚಾರ: ಗರ್ಭಪಾತಕ್ಕೆ ಕೇರಳ ಹೈಕೋರ್ಟ್ ಅಂಗೀಕಾರ

ಕೇರಳ: ತನ್ನ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್​ ಅಂಗೀಕರಿಸಿದೆ.

ಅತ್ಯಾಚಾರ ಸಂತ್ರಸ್ತೆಯು 10 ವರ್ಷ ಪ್ರಾಯದವಳಾಗಿದ್ದು ಗರ್ಭಾವಸ್ಥೆಯಿಂದ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪಿ.ವಿ. ಕುಂಯಿಕೃಷ್ಣನ್​​ ನೇತೃತ್ವದ ಪೀಠ, ಪುತ್ರಿಗೆ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿಯನ್ನು ಪುರಸ್ಕರಿಸಿದೆ.

ಈ ಕೃತ್ಯವನ್ನು ಎಸಗಿದವರು ಬಾಲಕಿಯ ಸ್ವಂತ ತಂದೆ ಎಂಬ ಆರೋಪವಿದೆ. ಕಾನೂನು ವ್ಯವಸ್ಥೆಯು ಖಂಡಿತವಾಗಿಯೂ ಆರೋಪಿಗೆ ಶಿಕ್ಷಿಸಲಿದೆ ಎಂಬ ನಂಬಿಕೆ ನನಗಿದೆ ಎಂದು ನ್ಯಾಯಪೀಠ ಹೇಳಿದೆ.