ಲಖನೌ: ಜನವರಿ 1 ರಂದು ಕುಂಭಮೇಳದಲ್ಲಿ(Kumbamela) ಬಾಂಬ್ ಸ್ಫೋಟಿಸಲಾಗುವುದು ಮತ್ತು 1000 ಜನರನ್ನು ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕ್ರಮಕೈಗೊಂಡಿರುವ ಉತ್ತರಪ್ರದೇಶದ ಪೊಲೀಸರು ಬಿಹಾರದ ಪೂರ್ಣಿಯ ಮೂಲದ ಯುವಕನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.(Bomb Threat)
ಪೊಲೀಸರು ಪೂರ್ಣಿಯಾ ಪೊಲೀಸರ ಸಹಾಯದಿಂದ ಭವಾನಿಪುರ ಪೊಲೀಸ್ ಠಾಣೆಯ ಶಹೀದ್‌ಗಂಜ್‌ನಲ್ಲಿ ಆರೋಪಿ ಆಯುಷ್ ಜೈಸ್ವಾಲ್‌ನನ್ನು(Ayush Jaiswal) ಬಂಧಿಸಿದ್ದಾರೆ. ನಾಸರ್ ಪಠಾಣ್ ಹೆಸರಿನಲ್ಲಿ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಬಾಂಬ್ ಹಾಕುವುದಾಗಿ ಆಯುಷ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಬೆದರಿಕೆ ಹಾಕಿದ್ದ. ಈ ಬಗ್ಗೆ ಪ್ರಯಾಗ್‌ರಾಜ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದರು.
ಬಂಧನವನ್ನು ಖಚಿತಪಡಿಸಿದ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯ ಕೆ ಶರ್ಮಾ, ಭವಾನಿಪುರದ ಶಹೀದ್ಗಂಜ್ನಿಂದ ಆರೋಪಿ ಆಯುಷ್ ಜೈಸ್ವಾಲ್ ನನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು. ನಾಸರ್ ಪಠಾಣ್‌ನಂತೆ ಎಂಬ ಹೆಸರಿನಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಬಾಂಬ್ ಹಾಕುವುದಾಗಿ ಮತ್ತು ಇನ್‌ಸ್ಟಾಗ್ರಾಮ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ 1000 ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಎಲ್ಲಾ ಅಂಶಗಳ ಬಗ್ಗೆ ಯುಪಿ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದು, ತನಿಖೆಯ ನಂತರವೇ ಸತ್ಯಾಂಶ ಬಹಿರಂಗಗೊಳ್ಳಲಿದೆ. ಸದ್ಯ ಕಾನೂನು ಕ್ರಮ ಕೈಗೊಂಡಿರುವ ಯುಪಿ ಪೊಲೀಸರು ಆರೋಪಿಯನ್ನು ತನ್ನೊಂದಿಗೆ ಯುಪಿಗೆ ಕರೆದೊಯ್ದಿದ್ದಾರೆ.
ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಬಾಂಬ್ ಹಾಕುವುದಾಗಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಮೂಲಕ Nasar_kattar_miya ಖಾತೆಯಿಂದ ಬೆದರಿಕೆ ಹಾಕಲಾಗಿತ್ತು. ಈ ಇನ್‌ಸ್ಟಾಗ್ರಾಮ್ ಖಾತೆಯು ಭವಾನಿಪುರ ಪೊಲೀಸ್ ಠಾಣೆಯ ಶಹೀದ್‌ಗಂಜ್ ನಿವಾಸಿಯಾಗಿರುವ ಆಯುಷ್ ಜೈಸ್ವಾಲ್‌ಗೆ ಸೇರಿದ್ದು ಎಂದು ಇದುವರೆಗಿನ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
32 ವರ್ಷಗಳಿಂದ ಸ್ನಾನ ಮಾಡದ ಸಾಧು
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಮಹಾ ಕುಂಭಮೇಳ ಕ್ಷಣಗಣನೆ ಆರಂಭವಾಗಿದ್ದು, ದೇಶದ ಮೂಲೆ ಮೂಲೆಯಿಂದ ಇಲ್ಲಿಗೆ ಕೋಟ್ಯಂತರ ಸಾಧು-ಸಂತರು ಆಗಮಿಸುತ್ತಿದ್ದಾರೆ. ಈ ಪೈಕಿ ಅಸ್ಸಾಂನ ಕಾಮಾಖ್ಯ ಪೀಠದ ಗಂಗಾಪುರಿ ಮಹಾರಾಜ್ ಮಹಾ ಕುಂಭಮೇಳದ ಪ್ರಮುಖ ಆಕರ್ಷಣೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಇವರು 32 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ.
ಈ ಬಗ್ಗೆ ಮಾತನಾಡಿರುವ ಅವರು ನನಗೆ ಕಳೆದ 32 ವರ್ಷಗಳಿಂದ ಈಡೇರದ ಆಸೆ ಇದೆ. ಅದು ಈಡೇರುವವರೆಗೂ ನಾನು ಗಂಗೆಯಲ್ಲಿ ಸ್ನಾನ ಮಾಡುವುದಿಲ್ಲ.ಇದು ಮಿಲನ್ ಮೇಳ. ಆತ್ಮದಿಂದ ಆತ್ಮಕ್ಕೆ ಸಂಪರ್ಕ ಹೊಂದಿರಬೇಕು ಮತ್ತು ಅದಕ್ಕಾಗಿಯೇ ನಾನು ಇಲ್ಲಿದ್ದೇನೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Murder case: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಚಾಕುವಿನಿಂದ ಇರಿದು ತಾಯಿಯನ್ನೇ ಕೊಂದ ಪಾಪಿ ಮಗ!