Thursday, 12th December 2024

ತಮಿಳುನಾಡಿನಲ್ಲಿ ಲಾಕ್‌ಡೌನ್‌ ವಿಸ್ತರಣೆ

ಚೆನ್ನೈ : ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ಮಧ್ಯಾವಧಿಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಶನಿವಾರ ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್-19 ಸೋಂಕು ಇಳಿದಿರುವ ಜಿಲ್ಲೆಗಳಲ್ಲಿ ಕೆಲ ಸಡಿಲತೆಯೊಂದಿಗೆ ಮತ್ತು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಿನ ನಿರ್ಬಂಧಗಳೊಂದಿಗೆ ತಮಿಳುನಾಡಿನಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.

ಉನ್ನತ ಅಧಿಕಾರಿಗಳೊಂದಿಗೆ ಸಿಎಂ ಅಧ್ಯಕ್ಷತೆ ವಹಿಸಿ ಸಭೆ ಕರೆದ ಒಂದು ದಿನದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಕಳೆದ 24 ಗಂಟೆಗಳಲ್ಲಿ, ರಾಜ್ಯದಲ್ಲಿ 22,651 ಹೊಸ ವೈರಸ್ ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲೇ ಅತಿ ಹೆಚ್ಚು. ದೇಶದಲ್ಲಿ ಶೇ.18.79ರಷ್ಟು ಹೊಸ ಪ್ರಕರಣಗಳಿಗೆ ತಮಿಳುನಾಡು ಮಾತ್ರ ಕಾರಣವಾಗಿದೆ.

ಆದಾಗ್ಯೂ, ವಿಸ್ತರಣೆಯು ಕರ್ಫ್ಯೂ ನಿಯಮಗಳಲ್ಲಿ ಸಡಿಲಿಕೆಗಳೊಂದಿಗೆ ಬರುತ್ತದೆ.  ಕೊಯಮತ್ತೂರು, ನೀಲಗಿರಿ, ತಿರುಪ್ಪೂರು, ಈರೋಡ್, ಸೇಲಂ, ಕರೂರ್, ನಾಮಕ್ಕಲ್, ತಂಜಾವೂರು, ತಿರುವರೂರ್, ನಾಗಪಟ್ಟಣಂ ಮತ್ತು ಮೈಲಾಡುತುರೈ 11 ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ ಇದೆ.