ಚಂಡೀಗಢ: ಸಾಂಕ್ರಾಮಿಕ ಎಚ್ಚರಿಕೆ-ಸುರಕ್ಷಿತ ಹರಿಯಾಣ ಅಭಿಯಾನದ ಅಡಿಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಲಾಕ್ಡೌನ್ ವಿಸ್ತರಿಸುವುದಾಗಿ ಹರಿಯಾಣ ಸರ್ಕಾರ ಘೋಷಿಸಿದೆ.
ಲಾಕ್ಡೌನ್ ಅನ್ನು ಜು.26 ರವರೆಗೆ ವಿಸ್ತರಿಸಲಾಗಿದ್ದು, ಸರ್ಕಾರ ಹೊಸ ಮಾರ್ಗಸೂಚಿಯನ್ನ ಹೊರಡಿಸಿದೆ.
ರಾಜ್ಯದಲ್ಲಿ ರಾತ್ರಿ 11 ಗಂಟೆಯವರೆಗೆ ರೆಸ್ಟೋರೆಂಟ್ಗಳು, ಢಾಬಾಗಳು ಮತ್ತು ಬಾರ್ಗಳನ್ನು ತೆರೆಯಬಹುದಾಗಿದ್ದು, 11 ಗಂಟೆಯವರೆಗೆ ಆಹಾರ ಪದಾರ್ಥ ಗಳನ್ನು ಮನೆಗೆ ತಲುಪಿಸಬಹುದು. ಸಾಂಕ್ರಾಮಿಕ ರೋಗವನ್ನ ತಡೆಗಟ್ಟಲು ಜನರು ನಿಯಮಗಳನ್ನ ಪಾಲಿಸದಿದ್ದರೆ, ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಲು ಪೊಲೀಸರನ್ನ ಒತ್ತಾಯಿಸ ಲಾಗುತ್ತದೆ ಎಂದು ಗೃಹ ಸಚಿವ ಅನಿಲ್ ವಿಜ್ ಪುನರುಚ್ಚರಿಸಿದರು.
ಮೂರನೇ ಅಲೆ ಆತಂಕ ಎದುರಾಗುತ್ತಿದ್ದು, ಜನ ಅದನ್ನ ತಡೆಗಟ್ಟುವ ನಿಯಮಗಳನ್ನ ಅನುಸರಿಸುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.