Saturday, 23rd November 2024

ಮದರಸಾಗಳು ತಮ್ಮಷ್ಟಕ್ಕೆ ತಾವೇ ಶಿಕ್ಷಕರನ್ನು ನೇಮಿಸಿಕೊಳ್ಳುವಂತಿಲ್ಲ: ಸುಪ್ರೀಂ

ವದೆಹಲಿ: ಸರ್ವೋಚ್ಚ ನ್ಯಾಯಾಲಯವು ಅನುದಾನಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು/ ಶಾಲೆ/ಶಾಲೆ ಕಾಲೇಜುಗಳು ತಮ್ಮಷ್ಟಕ್ಕೆ ತಾವೇ ಶಿಕ್ಷಕರನ್ನು ನೇಮಿಸಿಕೊಳ್ಳುವಂತಿಲ್ಲ. ಸರ್ಕಾರವು ಅರ್ಹ ಮತ್ತು ಸೂಕ್ತ ಶಿಕ್ಷಕರನ್ನು ನೀಡಿದರೆ, ಅವರನ್ನು ನೇಮಿಸಬೇಕಾಗುತ್ತದೆ ಎಂದಿದೆ.

ಈ ಮೂಲಕ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ ಕಾಯ್ದೆ, 2008 ಅನ್ನು ಮಾನ್ಯವೆಂದು ಘೋಷಿಸಿತು.

ಕಲ್ಕತ್ತಾ ಹೈಕೋರ್ಟ್ ಕಾಯ್ದೆಯ ಸೆಕ್ಷನ್ 8, 10, 11, 12 ಅನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿತ್ತು ಮತ್ತು ಈ ನಿಬಂಧನೆಯು ಸಂವಿಧಾನದ ಅನುಚ್ಛೇದ 30 (1) ರ ಉಲ್ಲಂಘನೆಯಾಗಿದೆ. ಇದರಲ್ಲಿ ಅಲ್ಪಸಂಖ್ಯಾತರು ತಮ್ಮ ಶಿಕ್ಷಣ ಸಂಸ್ಥೆ ಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದೆ.

ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮದರಸಾಗಳಿಗೆ ಸೇವಾ ಆಯೋಗವು ನಾಮನಿರ್ದೇಶನ ಮಾಡಿದ ಕೆಲವು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನಂತರ, ಮಜ್ನಾ ಹೈ ಮದರಸಾ ಇತ್ಯಾದಿಗಳು ಮತ್ತೆ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದವು, ಅದನ್ನು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ವಜಾಗೊಳಿಸಿತು.

ಸರ್ಕಾರದಿಂದ ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದರೆ, ಅವರು ಸರ್ಕಾರದ ಅರ್ಹತೆ ಮತ್ತು ಉತ್ಕೃಷ್ಟತೆಯ ಮಾನದಂಡ ಗಳನ್ನು ಅನುಸರಿಸಬೇಕು. ಏಕೆಂದರೆ ಶಿಕ್ಷಕರು ಏನು ಕಲಿಸುತ್ತಿದ್ದಾರೆ ಎಂಬುದನ್ನು ನೋಡುವುದು ಸರ್ಕಾರದ ಕೆಲಸವಾಗಿದೆ ಎಂದು ಹೇಳಿದೆ.