Saturday, 23rd November 2024

ಮಣಿಪುರ ಸಿಎಂಗೆ ಕೊರೋನಾ ಪಾಸಿಟಿವ್

ನವದೆಹಲಿ : ಮಣಿಪುರ ರಾಜ್ಯದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢ ಪಟ್ಟಿದೆ.

ಈ ಕುರಿತಂತೆ, ತಾವು ಸ್ವಯಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದು, ನನ್ನ ಸಂಪರ್ಕದಲ್ಲಿದ್ದವರು ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.

ಟ್ವಿಟ್ ಮಾಡಿ, ತಮಗೂ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಸ್ವಯಂ ಐಸೋಲೇಷನ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.