ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಅಸಭ್ಯ ನಡವಳಿಕೆ ಮತ್ತು ಧೂಮಪಾನದ ಆರೋಪದ ಮೇಲೆ ಬಂಧಿತರಾಗಿದ್ದ ರತ್ನಾಕರ್ ದ್ವಿವೇದಿ ಅವರು ಜಾಮೀನಿಗೆ 25,000 ರೂ ಪಾವತಿಸಲು ನಿರಾಕರಿಸಿದ ನಂತರ ಅವರನ್ನು ನ್ಯಾಯಾಲಯವು ಜೈಲಿಗೆ ಕಳುಹಿಸಿದೆ.
ಆರೋಪಿ ರತ್ನಾಕರ್ ದ್ವಿವೇದಿ ಅವರಿಗೆ ನ್ಯಾಯಾಲಯವು ನಗದು ಜಾಮೀನು ನೀಡಿದ್ದರೂ, ಅದನ್ನು ಪಾವತಿ ಸಲು ನಿರಾಕರಿಸಿದ ಅವರು ಜೈಲಿಗೆ ಹೋಗಲು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಲಂಡನ್‌ನಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದ ರೆಸ್ಟ್‌ರೂಮ್‌ನಲ್ಲಿ ಧೂಮಪಾನ ಮಾಡುವುದನ್ನು ಗಮನಿಸಿದ ಮತ್ತು ಅಸಹ್ಯಕರ ರೀತಿಯಲ್ಲಿ ವರ್ತಿಸಿದ ನಂತರ ಭಾರತೀಯ ಕ್ರಿಮಿನಲ್ ಕೋಡ್‌ನ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಅಡಿಯಲ್ಲಿ ರತ್ನಾಕರ ಅವರನ್ನು ಬಂಧಿಸಲಾಯಿತು.
ಪ್ರಯಾಣಿಕ ರತ್ನಾಕರ್ ದ್ವಿವೇದಿ ರೆಸ್ಟ್ ರೂಂನಲ್ಲಿ ಧೂಮಪಾನ ಮಾಡುತ್ತಿರುವುದು ಮತ್ತು ಹಲವಾರು ಎಚ್ಚರಿಕೆ ಗಳ ಹೊರತಾಗಿಯೂ ಪೈಲಟ್‌ನ ಧ್ವನಿ ಮತ್ತು ಲಿಖಿತ ಆದೇಶಗಳನ್ನು ಧಿಕ್ಕರಿಸುವುದರ ಜೊತೆಗೆ ಆಕ್ರಮಣಕಾರಿ ಯಾಗಿ ವರ್ತಿಸಿದ್ದನು ಎಂದು ಹೇಳಿದೆ.