Wednesday, 11th December 2024

ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಮೋದಿ

ನವದೆಹಲಿ: ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಇಂದು ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.

ಸಂಕ್ರಾಂತಿಯನ್ನು ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ, ಆಂಧ್ರ, ತೆಲಂಗಾಣದಲ್ಲಿ ಬೋಗಿ, ತಮಿಳುನಾಡಿನಲ್ಲಿ ಪೊಂಗಲ್​, ಅಸ್ಸಾಂನಲ್ಲಿ ಮಘ ಬಿಹು ಎಂದು ಅಲ್ಲದೇ ದೇಶದ ವಿವಿಧೆಡೆ ಉತ್ತರಾಯಣ ಹೆಸರಲ್ಲಿ ಸಂಕ್ರಾಂತಿಯನ್ನು ಆಚರಣೆ ಮಾಡಲಾಗುತ್ತದೆ.

ಪ್ರಧಾನಿ ಮೋದಿ, ದೇಶಾದ್ಯಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಸೂಚಿಸುವ ವಿವಿಧ ಹೆಸರಿನಲ್ಲಿ ಹಬ್ಬವನ್ನು ಆಚರಿಸುತ್ತೇವೆ. ಮಕರ ಸಂಕ್ರಾಂತಿ, ಉತ್ತರಾಯಣ, ಭೋಗಿ, ಮಘ ಬಿಹು ಮತ್ತು ಪೊಂಗಲ್​ ಅನ್ನು ಉಲ್ಲೇಖಿಸಿ ಶುಭ ಕೋರಿದ್ದಾರೆ.