ಮುಂಬೈ/ಗೋವಾ: ಮುಂಬೈಯಿಂದ ಗೋವಾಗೆ ತೆರಳಿದ್ದ ಕ್ರೂಸ್ಲೈನರ್ ನೌಕೆಯೊಂದರಲ್ಲಿದ್ದ ಪ್ರಯಾಣಿಕರಿಗೆ ಕೋವಿಡ್-19 ಪಾಸಿಟಿವ್ ಆದ ಕಾರಣ, ಉಳಿದ 2,000ದಷ್ಟು ಪ್ರಯಾಣಿಕರನ್ನು ಪ್ರಯಾಣಿಕರಿಗೆ ಕೆಳಗಿಳಿಯದಿರಲು ಸೂಚಿಸಲಾಗಿದೆ.
ವಿಷಯ ತಿಳಿದ ಕೂಡಲೇ ಹಡಗಿನ ಬಳಿ ಪೊಲೀಸ್ ಕಾವಲು ಇಟ್ಟ ಗೋವಾ ರಾಜ್ಯ ಸರ್ಕಾರ, ಪ್ರಯಾಣಿ ಕರನ್ನು ಇಳಿಯಲು ಬಿಡಲಿಲ್ಲ. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಇದೀಗ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕಿತ ಮಂದಿಯನ್ನು ನೌಕೆಯಲ್ಲೇ ಐಸೋಲೇಷನ್ನಲ್ಲಿ ಇಡಲಾಗಿದೆ.
ಆರ್ಟಿ-ಪಿಸಿಆರ್ ಪರೀಕ್ಷೆಗಳ ವರದಿ ಬರುವವರೆಗೂ ನೌಕೆಯಲ್ಲಿದ್ದ ಪಿಪಿಇ ಕಿಟ್ಧಾರಿ ವೈದ್ಯಕೀಯ ತಂಡವೊಂದನ್ನು ನೌಕೆಯೊಳಗೆ ಕಳುಹಿಸಿ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗಿದೆ.
2016 ಪ್ರಯಾಣಿಕರನ್ನು ಹೊತ್ತ ಕಾರ್ಡೆಲಿಯಾ ಕ್ರೂಸಸ್ ಎಂಪ್ರೆಸ್ ನೌಕೆಯು ಮುಂಬೈಯಿಂದ ಹೊರಟು ಮೊರ್ಮುಗಾಂವ್ ಬಂದರಿನ ನಿಲ್ದಾಣ ದಲ್ಲಿದೆ.
ನೌಕೆ ಬಿಡುವ ಮುನ್ನ ಈ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ನಾವು ಅವರಿಗೆ ಸೂಚಿಸಿದ್ದೇವೆ,” ಎಂದು ಗೋವಾ ಸರ್ಕಾರದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.