Monday, 16th September 2024

Jio Brain: ಜಿಯೋ ಬ್ರೈನ್‌ನಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆರಂಭ: ಮುಕೇಶ್ ಅಂಬಾನಿ ಮಹತ್ವದ ಘೋಷಣೆ

Jio brain

ಮುಂಬೈ: ಜಿಯೋ ಬ್ರೈನ್(Jio Brain) ನಿಂದ ಶೀಘ್ರದಲ್ಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್/ಕೃತಕ ಬುದ್ದಿಮತೆ (AI) ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 47 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗುರುವಾರ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಈ ಮಾಹಿತಿಯನ್ನು ನೀಡಿದ್ದಾರೆ. ಕನೆಕ್ಟೆಡ್ ಇಂಟೆಲಿಜೆನ್ಸ್ ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ ಬರುತ್ತದೆ. ಕಂಪನಿಯು “ಎಐ ಎವೆರಿವೇರ್ ಫಾರ್ ಎವರಿಒನ್” ಎಂಬ ಥೀಮ್ ಮೇಲೆ ಇದನ್ನು ಪ್ರಾರಂಭಿಸುತ್ತದೆ ಎಂದರು.

ಸಂಪೂರ್ಣ ಎಐ ಅನ್ನು ಒಳಗೊಂಡಿರುವ ಉಪಕರಣಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಸಮಗ್ರ ಸೂಟ್ ಅನ್ನು ಅಭಿವೃದ್ಧಿಪಡಿಸುತ್ತಿದೆ – ಇದನ್ನು ‘ಜಿಯೋ ಬ್ರೈನ್’ ಎಂದು ಕರೆಯಲಾಗುತ್ತದೆ. “ರಿಲಯನ್ಸ್‌ ಜಿಯೋ ಬ್ರೈನ್ ಅನ್ನು ಗಟ್ಟಿಗೊಳಿಸುವ ಮೂಲಕ ನಾವು ಶಕ್ತಿಯುತ ಎಐ ಸೇವೆಗಳ ಪ್ಲಾಟ್ ಫಾರ್ಮ್ ರೂಪಿಸುತ್ತೇವೆ ಎಂಬುದಾಗಿ ನಾನು ಭಾವಿಸುತ್ತೇನೆ,” ಎಂದು ಅಂಬಾನಿ ಹೇಳಿದರು. ನಾವು ಜಾಮ್‌ನಗರದಲ್ಲಿ ಗಿಗಾವ್ಯಾಟ್-ಪ್ರಮಾಣದ ಎಐ- ಸಿದ್ಧ ಡೇಟಾ ಕೇಂದ್ರವನ್ನು ಸ್ಥಾಪಿಸಲು ಯೋಜಿಸಿದ್ದೇವೆ, ಇದು ಸಂಪೂರ್ಣವಾಗಿ ರಿಲಯನ್ಸ್‌ನ ಹಸಿರು ಶಕ್ತಿಯಿಂದ ಚಾಲಿತವಾಗುತ್ತದೆ. ಭಾರತದಲ್ಲಿಯೇ ವಿಶ್ವದ ಅತ್ಯಂತ ಕೈಗೆಟುಕುವ ಎಐ ಇಂಟರ್ ಫೇಸಿಂಗ್ ಸೃಷ್ಟಿಸುವುದು ನಮ್ಮ ಗುರಿಯಾಗಿದೆ. “ಇದು ಭಾರತದಲ್ಲಿ ಎಐ ಅಪ್ಲಿಕೇಷನ್‌ಗಳನ್ನು ಹೆಚ್ಚು ಕೈಗೆಟುಕುವ ಮತ್ತು ಎಲ್ಲರಿಗೂ ಸಂಪರ್ಕ ಸಿಗುವಂತೆ ಮಾಡುತ್ತದೆ,” ಎಂದರು.

ಈ ಸಂದರ್ಭದಲ್ಲಿ ಜಿಯೋ ಎಐ -ಕ್ಲೌಡ್ ವೆಲ್ಕಮ್ ಆಫರ್ ಅನ್ನು ಘೋಷಿಸಲಾಯಿತು – ಎಲ್ಲ ಡಿಜಿಟಲ್ ಕಂಟೆಂಟ್ ಮತ್ತು ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಸಂಪರ್ಕಿಸಲು 100 ಜಿಬಿ ತನಕ ಉಚಿತ ಕ್ಲೌಡ್ ಸಂಗ್ರಹಣೆ ದೊರೆಯಲಿದೆ. ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹಲವಾರು ಹೊಸ ಎಐ ಸೇವೆಗಳನ್ನು ಘೋಷಿಸಿದ್ದಾರೆ. ಇದು ಜಿಯೋ ಟಿವಿಒಎಸ್ (Jio TVOS), ಹಲೋಜಿಯೋ (HelloJio), ಜಿಯೋ ಐಒಟಿ ಸಲ್ಯೂಷನ್ (Jio Home IoT), ಜಿಯೋ ಹೋಮ್ (JioHome) ಅಪ್ಲಿಕೇಷನ್ ಮತ್ತು ಜಿಯೋ ಫೋನ್ ಕಾಲ್ ಎಐ (Jio Phonecall AI) ಅನ್ನು ಒಳಗೊಂಡಿದೆ.

https://x.com/business_today/status/1829132390200930810

ಹೊಸ ಇಂಧನ ವ್ಯಾಪಾರದಿಂದ ಭರ್ಜರಿ ಆದಾಯ

ಈಗ ತೈಲದಿಂದ ರಾಸಾಯನಿಕ ವ್ಯವಹಾರದಲ್ಲಿ ಮಾಡುತ್ತಿರುವ ನಮ್ಮದೇ ಆದಾಯವನ್ನು ರಿಲಯನ್ಸ್‌ನ ಹೊಸ ಇಂಧನ ವ್ಯವಹಾರವು ಆರಂಭವಾದ 5 ರಿಂದ 7 ವರ್ಷಗಳಲ್ಲಿ ಗಳಿಸಲಿದೆ ಎಂದು ಮುಕೇಶ್ ಅಂಬಾನಿ ಗುರುವಾರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ. “ಕಛ್ ನಲ್ಲಿ ಕಂಪನಿಯು ಬಂಜರು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದೆ. ಈ ಬರಡು ಭೂಮಿಯಲ್ಲಿ ಮುಂದಿನ 10 ವರ್ಷಗಳಲ್ಲಿ ಸುಮಾರು 150 ಬಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದು ಭಾರತದ ಇಂಧನ ಅವಶ್ಯಕತೆಯ ಸುಮಾರು ಶೇ 10ರಷ್ಟಕ್ಕೆ ಸಮನಾಗಿರುತ್ತದೆ,” ಎಂದಿದ್ದಾರೆ.

ಈ ವರ್ಷದ ಅಂತ್ಯದ ವೇಳೆಗೆ ನಮ್ಮ ಸ್ವಂತ ಸೋಲಾರ್ ಫೋಟೋ-ವೋಲ್ಟಾಯಿಕ್ (ಪಿವಿ) ಮಾಡ್ಯೂಲ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತೇವೆ. ಮುಂದಿನ ತ್ರೈಮಾಸಿಕಗಳಲ್ಲಿ ನಮ್ಮ ಸಮಗ್ರ ಸೌರ ಉತ್ಪಾದನಾ ಕೇಂದ್ರಗಳ ಮೊದಲ ಹಂತವನ್ನು ಪೂರ್ಣಗೊಳಿಸುತ್ತೇವೆ. ಇದು ಮಾಡ್ಯೂಲ್‌ಗಳು, ಸೆಲ್ ಗಳು, ಗಾಜು, ವೇಫರ್‌ಗಳು ಮತ್ತು ಪಾಲಿಸಿಲಿಕಾನ್‌ಗಳನ್ನು ಒಳಗೊಂಡಿರುತ್ತದೆ. ಆರಂಭಿಕ ವಾರ್ಷಿಕ ಸಾಮರ್ಥ್ಯ 10 ಗಿಗಾವಾಟ್. ನಾವು ಜಾಮ್‌ನಗರದಲ್ಲಿ 30 ಗಿಗಾವಾಟ್ (GWh) ವಾರ್ಷಿಕ ಸಾಮರ್ಥ್ಯದೊಂದಿಗೆ ಸಮಗ್ರ ಸುಧಾರಿತ ರಾಸಾಯನಿಕ ಆಧಾರಿತ ಬ್ಯಾಟರಿ ಉತ್ಪಾದನಾ ಕೇಂದ್ರದ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ. “ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಉತ್ಪಾದನೆ ಪ್ರಾರಂಭವಾಗುತ್ತದೆ,” ಎಂದು ಮುಕೇಶ್ ಅಂಬಾನಿ ಹೇಳಿದರು.

Leave a Reply

Your email address will not be published. Required fields are marked *