ಚೆನ್ನೈ: ತಮಿಳುನಾಡಿನಲ್ಲಿ ಕೋವಿಡ್ ಲಾಕ್ ಡೌನ್ ಅನ್ನು ಮೇ 24 ರಿಂದ ಒಂದು ವಾರ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶನಿವಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್ ಈಗಾಗಲೇ ಜಾರಿಯಲ್ಲಿದೆ.
ಸಿಎಂ ಸ್ಟಾಲಿನ್ ಅವರು ವೈದ್ಯಕೀಯ ತಜ್ಞರು ಮತ್ತು ಶಾಸಕಾಂಗ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಈ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸೋಂಕು ನಿಯಂತ್ರಿಸಲು ಲಾಕ್ ಡೌನ್ ವಿಸ್ತರಿಸುವಂತೆ ಆರೋಗ್ಯ ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದರು.
ಮೇ 24ಕ್ಕೆ ಅಂತ್ಯವಾಗಬೇಕಿದ್ದ ಲಾಕ್ ಡೌನ್ ಅನ್ನು ಈಗ ಮತ್ತೆ ಒಂದು ವಾರ ವಿಸ್ತರಿಸಲಾಗಿದೆ. ಶುಕ್ರವಾರ ಕರೋನಾ ಸೋಂಕಿನಿಂದ 467 ಮಂದಿ ಮೃತಪಟ್ಟಿದ್ದು, 36184 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.