Friday, 20th September 2024

Padma Awards 2024 Nominations: ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಸೆ.15 ಕೊನೆಯ ದಿನ

Padma Awards

ನವದೆಹಲಿ: 2025 ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿ(Padma Awards 2024 Nominations)ಗಳಾದ ‘ಪದ್ಮ ವಿಭೂಷಣ’, ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ ಪ್ರಕಟಿಸುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯ(Home Ministry) ಈ ಬಗ್ಗೆ ಪ್ರಕಟಣೆಯ ಹೊರಡಿಸಿದ್ದು, ಈಗಾಗಲೇ ಈ ಪ್ರಶಸ್ತಿಗಳಿಗೆ ಮೇ 1ರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸೆ. 15 ಕೊನೆಯ ದಿನಾಂಕವಾಗಿದೆ.

ಕೇವಲ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ರಾಷ್ಟ್ರೀಯ ಪುರಸ್ಕಾರ್‌ ಪೋರ್ಟಲ್‌ ಅಥವಾ https://awards.gov.in ಭೇಟಿ ಕೊಟ್ಟು ನಾಮನಿರ್ದೇಶನ ಅಥವಾ ಸಾಧಕರನ್ನು ಗುರುತಿಸಿ ಇತರರೂ ಶಿಫಾರಸು ಮಾಡಬಹುದಾಗಿದೆ. ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅಂದರೆ ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರೀಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ನಾಮನಿರ್ದೇಶನಗಳು ಅಥವಾ ಶಿಫಾರಸುಗಳು ಮೇಲೆ ಹೇಳಿದ ಪೋರ್ಟಲ್‌ನಲ್ಲಿ ನಿಗದಿಪಡಿಸಿದ ಎಲ್ಲಾ ಅಗತ್ಯ ವಿವರಗಳನ್ನು ಒಳಗೊಂಡಿರಬೇಕು, ನಿರೂಪಣಾ ರೂಪದಲ್ಲಿ ಗರಿಷ್ಠ 800 ಪದಗಳು ಮೀರದಂತೆ ಆ ಸಾಧಕರು ಮತ್ತು ಅವರ ಸಾಧನೆ ಬಗ್ಗೆ ವಿವರಗಳಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15, 2024 ಗಡುವು ಆಗಿದ್ದು, ಕೊನೆಯ ದಿನಾಂಕ ಸಮೀಪಿಸುತ್ತಿರುವಾಗ, ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಗಮನಾರ್ಹ, ಸಾಧಕ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನಾಗರಿಕರಿಗೆ ಕರೆ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ ಪ್ರಧಾನಿ ಮೋದಿ, ಕಳೆದ ಹಲವು ವರ್ಷಗಳಿಂದ ಬಹಳ ತಳಮಟ್ಟದ ಸಾಧಕರನ್ನು ಗುರುತಿಸಿ ಅತ್ಯುನ್ನತ ಪ್ರಶಸ್ತಿ ನೀಡುತ್ತಿದ್ದೇವೆ. ಅವರ ಜೀವನ ಮತ್ತು ಸಾಧನೆ ಅನೇಕರಿಗೆ ಸ್ಪೂರ್ತಿಯಾಗಲಿದೆ. ಪದ್ಮ ಪ್ರಶಸ್ತಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ನಾನು ಹೆಚ್ಚಿನ ಜನರನ್ನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಗೃಹ ವ್ಯವಹಾರಗಳ ಸಚಿವಾಲಯದ (MHA) ಬಿಡುಗಡೆಯ ಪ್ರಕಾರ, ಗಣರಾಜ್ಯೋತ್ಸವದಂದು ಪ್ರಕಟಿಸಲಾಗುವ ಪದ್ಮ ಪ್ರಶಸ್ತಿಗಳು 2025 ಗಾಗಿ ಆನ್‌ಲೈನ್ ನಾಮನಿರ್ದೇಶನಗಳು ಮೇ 1, 2024 ರಂದು ಪ್ರಾರಂಭವಾಯಿತು. ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್ ಮೂಲಕ ನಾಮನಿರ್ದೇಶನಗಳನ್ನು ಸ್ವೀಕರಿಸಲಾಗುತ್ತಿದೆ.

ಪದ್ಮ ಪ್ರಶಸ್ತಿಗಳು-ಪದ್ಮ ವಿಭೂಷಣ, ಪದ್ಮಭೂಷಣ, ಮತ್ತು ಪದ್ಮಶ್ರೀ-ಒಳಗೊಂಡಿರುವ ಭಾರತದ ಅತ್ಯುನ್ನತ ನಾಗರಿಕ ಗೌರವಗಳು, 1954 ರಲ್ಲಿ ಸ್ಥಾಪಿಸಲಾಯಿತು. ಪ್ರಶಸ್ತಿಗಳು ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಸೇವೆ, ವಿಜ್ಞಾನ, ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು ಮತ್ತು ವ್ಯಾಪಾರ ಮತ್ತು ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗಳನ್ನು ಅಂಗೀಕರಿಸುತ್ತವೆ.

ನಾಮನಿರ್ದೇಶನ ಪ್ರಕ್ರಿಯೆಯು ಜನಾಂಗ, ಉದ್ಯೋಗ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ. ಆದರೆ, ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಸರ್ಕಾರಿ ನೌಕರರು ಈ ಪ್ರಶಸ್ತಿಗೆ ಅರ್ಹರಲ್ಲ.

ಈ ಸುದ್ದಿಯನ್ನೂ ಓದಿ: ಪದ್ಮಶ್ರೀ ಗುರು ಅರುಣಾ ಮೊಹಾಂತಿ ಅವರ ‘ಸಂಸಾರ’ – ಜೀವನದ ಪರಿಕಲ್ಪನೆಯ ಪ್ರದರ್ಶನ