Monday, 25th November 2024

ಪಾಕಿಸ್ತಾನದ ಮಹಿಳೆ, ಅಪ್ರಾಪ್ತ ಮಗನ ಅಕ್ರಮ ಪ್ರವೇಶ: ಬಂಧನ

ಡಾರ್ಜಿಲಿಂಗ್: ಭಾರತ-ನೇಪಾಳ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನದ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗನನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್​ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಇವರ ಬಳಿ ಮಾನ್ಯ ವೀಸಾ ಹಾಗೂ ಯಾವುದೇ ಅಧಿಕೃತವಾದ ದಾಖಲೆಗಳು ಇಲ್ಲ. ತಮ್ಮ ಸಹೋದರಿಯನ್ನು ಭೇಟಿ ಮಾಡಲು ಮಹಿಳೆ ತಮ್ಮ ಮಗನೊಂದಿಗೆ ಅಕ್ರಮವಾಗಿ ಬಂದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಪಾಕಿಸ್ತಾನದ ಪ್ರಜೆಯಾದ ಶೈಸ್ತಾ ಹನೀಫ್ ಹಾಗೂ ಈಕೆಯ 11 ವರ್ಷದ ಮಗ ಬಂಧಿತರು. ನೇಪಾಳದ ಕಾಕರ್ವಿಟಾದಿಂದ ಮೆಚಿ ನದಿಗೆ ನಿರ್ಮಿಸ ಲಾಗಿರುವ ಏಷ್ಯನ್ ಹೆದ್ದಾರಿಯ ಸೇತುವೆಯನ್ನು ತಾಯಿ-ಮಗ ದಾಟಿ ಗಡಿಯ ಸಿಲಿಗುರಿ ಸಮೀಪದ ಪಾನಿಟಂಕಿ ಎಂಬಲ್ಲಿಗೆ ಆಗಮಿಸಿದ್ದಾರೆ. ಈ ವಿಷಯ ತಿಳಿದ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ 41ನೇ ಬೆಟಾಲಿಯನ್ ಯೋಧರು ಇಬ್ಬರನ್ನು ತಡೆದಿದ್ದಾರೆ.

ಇದೇ ವೇಳೆ, ಇಬ್ಬರನ್ನು ತಪಾಸಣೆ ನಡೆಸಲಾಗಿದೆ. ಪಾಕಿಸ್ತಾನದ ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ. ಇವುಗಳ ಆಧಾರದ ಮೇಲೆ ತಾಯಿ-ಮಗ ಪಾಕಿಸ್ತಾನದ ಕರಾಚಿಯ ಗಹನ್ಮಾರ್ ಸ್ಟ್ರೀಟ್‌ನಲ್ಲಿರುವ ಸರಾಫಾ ಬಜಾರ್ ನಿವಾಸಿಗಳು ಎಂದು ತಿಳಿದುಬಂದಿದೆ.