Monday, 25th November 2024

21 ಕಿ.ಮೀ ಓಡಿ ಹೋಗಿ ನಾಮಪತ್ರ ಸಲ್ಲಿಸಿದ್ದಾರೆ..!

ಕೋಲ್ಕತ್ತಾ: ನಾಮಪತ್ರ ಸಲ್ಲಿಕೆಯಿಂದ ಹಿಡಿದು ಎಲೆಕ್ಷನ್‌ ಫಲಿತಾಂಶದ ದಿನದವರೆಗೂ ಅಭ್ಯರ್ಥಿಗಳು ಕೂತಲಿ ಕೂರುವುದಿಲ್ಲ ಎನ್ನುವ ಹಾಗೆ ನಾನಾ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ.

ಬಂಗಾಳದಲ್ಲಿ ಪಂಚಾಯತ್‌ ಚುನಾವಣೆಗೆ ಡೇಟ್‌ ಫಿಕ್ಸ್‌ ಆಗಿದೆ. ಈ ಚುನಾ ವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಡಾರ್ಜಿಲಿಂಗ್ ಹಿಲ್ಸ್ ನ ಶರಣ್ ಸುಬ್ಬ‌ ಎನ್ನುವವರು ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅವರು ನಾಮಪತ್ರ ಸಲ್ಲಿಸಲು ಹೋದ ವಿಧಾನವೇ ಸುದ್ದಿ ಯಾಗಿದೆ.

ಅಪಾರ ಬೆಂಬಲಿಗರ ದಂಡಿನೊಂದಿಗೆ ಅವರು ನಾಮಪತ್ರ ಸಲ್ಲಿಸುವ ಕಚೇರಿಗೆ ಹೋಗಿಲ್ಲ ಬದಲಾಗಿ. 21 ಕಿ.ಮೀ ಓಡಿಕೊಂಡು ಹೋಗಿ ನಾಮ ಪತ್ರವನ್ನು ಸಲ್ಲಿಸಿದ್ದಾರೆ.!

ಬೆಳಗ್ಗೆ 4 ಗಂಟೆಗೆ ನಾಮಪತ್ರವನ್ನು ಹಿಡಿದುಕೊಂಡು ಸೋನಾಡದಿಂದ ಸುಮಾರು 21 ಕಿ.ಮೀ ದೂರದಲ್ಲಿರುವ ಸುಖಿಯಾ ಪೋಖ್ರಿ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿಗೆ ಓಡಿಕೊಂಡು ಹೋಗಿದ್ದಾರೆ. 4 ಗಂಟೆಯಲ್ಲಿ ತನ್ನ ಓಟವನ್ನು ಪೂರ್ಣಗೊಳಿಸಿ, ನಾಮಪತ್ರ ಸಲ್ಲಿಸುವ ಕಚೇರಿಗೆ ಬಂದಿದ್ದಾರೆ. ಆದರೆ ಅವರು ತಲುಪುವ ವೇಳೆಗೆ ಕಚೇರಿ ಇನ್ನೂ ತೆರೆದಿರಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಕೂತು ಕಾದ ಬಳಿಕ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಜುಲೈ 8 ರಂದು ಒಂದೇ ಹಂತದಲ್ಲಿ ಪಂಚಾಯತ್‌ ಚುನಾವಣೆ ನಡೆಯಲಿದೆ.