ಆಗ್ರಾ: ಪತ್ನಿಗೆ ರಕ್ಷಕನಾಗಬೇಕಿದ್ದ ಪತಿಯೇ ರಕ್ಕಸನಾಗಿ ಆಕೆಯ ಮಾನ ಹರಾಜು ಹಾಕಿರುವ ಹೀನ ಕೃತ್ಯ ಘಟನೆ ಉತ್ತರ ಪ್ರದೇಶದ (uttar pradesh) ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ಸ್ನೇಹಿತನಿಂದ ಪತ್ನಿಯ ಮೇಲೆ ಅತ್ಯಾಚಾರ ಮಾಡಿಸಿ ಅದನ್ನ ವಿಡಿಯೋ ಮಾಡಿ 2 ಲಕ್ಷ ರೂ. ನೀಡುವಂತೆ ಬ್ಲ್ಯಾಕ್‌ಮೇಲ್(Blackmail) ಮಾಡಿದ್ದಾನೆ ಪತಿರಾಯ. ಸದ್ಯ ಆತ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ(Physical Abuse).
ಆಗ್ರಾದ ಎತ್ಮದ್ದೌಲಾ ಬಳಿ ಈ ಘಟನೆ ಸಂಭವಿಸಿದ್ದು, ಸೀತಾ ನಗರ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ನಂತರ ಅದನ್ನು ವಿಡಿಯೋ ಮಾಡಲಾಗಿದೆ. ತಿಂಗಳಲ್ಲಿ ಕೆಲ ದಿನ ಮಾತ್ರ ಮನೆಗೆ ಬರುವ ಪತಿ ತನ್ನ ಸ್ನೇಹಿತನ್ನು ಮನೆಗೆ ಕರೆದುಕೊಂಡು ತಾವು ಹೊರಗಿನಿಂದ ತಂದ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದಾನೆ. ನಂತರ ಎಲ್ಲರೂ ಊಟ ಮಾಡಿ ಮಲಗಲು ತೆರಳಿದ್ದರು. ಆದರೆ ಸಂತ್ರಸ್ತೆಗೆ ಏನೋ ಆರೋಗ್ಯ ಸಮಸ್ಯೆಯಾದಂತೆ ಅನುಭವವಾಗಿದೆ. ಆಕೆಯ ಪತಿ ಹಾಗೂ ಆಕೆಯ ಸ್ನೇಹಿತ ಊಟದಲ್ಲಿ ಮತ್ತು ಬರುವ ಔಷಧವನ್ನು ಹಾಕಿದ್ದರು. ಆರೋಪಿ ಪತಿ ಸ್ನೇಹಿತನ ಬಳಿ ಅತ್ಯಾಚಾರ ನಡೆಸುವಂತೆ ಸೂಚಿಸಿದ್ದಾನೆ. ಆತ ಅತ್ಯಾಚಾರ ನಡೆಸುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾನೆ.
ಕೆಲ ದಿನಗಳ ನಂತರ ಅತ್ಯಾಚಾರದ ವಿಡಿಯೋ ತೋರಿಸಿ 2 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾನೆ. ಒಂದು ವೇಳೆ ಹಣ ನೀಡದಿದ್ದರೆ ವಿಡಿಯೋವನ್ನು ವೈರಲ್ ಮಾಡುವುದಾಗಿ ಹೇಳಿದ್ದಾನೆ. ಪ್ರಕರಣ ಕುರಿತು ಸಂತ್ರಸ್ತೆ ತನ್ನ ಪತಿ ಹಾಗೂ ಆತನ ಸ್ನೇಹಿತನ ವಿರುದ್ಧ ದೂರು ದಾಖಲಿಸಿದ್ದಳು. ಮಹಿಳೆಯ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಮಾತನಾಡಿದ ಎಸಿಪಿ ಹೇಮಂತ್ ಕುಮಾರ್ “ಆಗ್ರಾದ ಎತ್ಮದ್ದೌಲಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ಸ್ನೇಹಿತನಿಂದ ಅತ್ಯಾಚಾರವೆಸಗಿ ಹಣಕ್ಕಾಗಿ ಬೆದರಿಕೆ ಹಾಕಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನೀಟ್ ಕೋಚಿಂಗ್ ಪಡೆಯಲು ಬಂದ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಆರು ತಿಂಗಳ ಕಾಲ ಅತ್ಯಾಚಾರ ಮಾಡಿದ ಇಬ್ಬರು ಶಿಕ್ಷಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಅವರು ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಖಿನ್ನತೆಗೊಳಗಾಗಿದ್ದರು. ಘಟನೆಯಾದ ಒಂದು ವರ್ಷದ ನಂತರ ವಿದ್ಯಾರ್ಥಿನಿ ದೂರು ದಾಖಲಿಸಿದ್ದಳು. ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಶನಿವಾರ ಆಕೆಯ ಹೇಳಿಕೆ ದಾಖಲಿಸಲಾಗಿದೆ. ಬಂಧಿತ ಶಿಕ್ಷಕರನ್ನು ಜೀವಶಾಸ್ತ್ರ ಕಲಿಸುವ ಸಾಹಿಲ್ ಸಿದ್ದಿಕಿ ಹಾಗೂ ರಸಾಯನ ಶಾಸ್ತ್ರ ಕಲಿಸುವ ವಿಕಾಸ್ ಪೋರ್ವಾಲ್ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Death Penalty: ಮರಣದಂಡನೆ ಸಮಯದಲ್ಲಿ ಅಪರಾಧಿ ಕಿವಿಯಲ್ಲಿ ಏನು ಹೇಳಲಾಗುತ್ತದೆ ಗೊತ್ತೇ?