Saturday, 23rd November 2024

ಉಕ್ಕಿನ ಮನುಷ್ಯನನ್ನು ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದ ಮೊದಲ ಉಪಪ್ರಧಾನಿ, ದೇಶವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಸ್ಮೃತಿದಿನವಾದ ಮಂಗಳವಾರ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಉಕ್ಕಿನ ಮನುಷ್ಯನನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿ ಗೌರವಿಸಿದ್ದಾರೆ.

ದೇಶದ ಐಕ್ಯತೆ, ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಅವರು ಹಾಕಿಕೊಟ್ಟ ದಾರಿ ನಮಗೆ ಸದಾ ಪ್ರೇರಣಾದಾಯಿ. ಅವರಿಗೆ ಶತ ಶತ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.

ಸರ್ದಾರ್ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ದೇಶದ ಮೊದಲ ಗೃಹ ಸಚಿವ ಮತ್ತು ಉಪಪ್ರಧಾನಿಯಾಗಿದ್ದ ವರು. ಬಹುತೇಕ ಮಾತುಕತೆ ಮೂಲಕವೇ ಎಲ್ಲವನ್ನೂ ನೆರವೇರಿಸಿದ್ದು, ಅಗತ್ಯ ಇರುವಲ್ಲಿ ಮಾತ್ರವೇ ಸೇನೆಯನ್ನು ಬಳಸಿದ್ದು ವಿಶೇಷ. ಸರ್ದಾರ್ ಪಟೇಲ್ ಪುಣ್ಯತಿಥಿ ನಿಮಿತ್ತ ನಾಡಿನಾದ್ಯಂತ ಅವರಿಗೆ ಗೌರವ ಸಲ್ಲಿಸಿದ್ದಾರೆ.