Wednesday, 30th October 2024

ಲಕ್ಷಾಂತರ ವೀಕ್ಷಣೆ ಪಡೆದ ಪ್ರಪ್ರಥಮ ಅಯೋಧ್ಯಾ ಬಾಲ ರಾಮ ಶ್ಲೋಕ

ಭವ್ಯವಾದ ಅಯೋಧ್ಯೆ ರಾಮಮಂದಿರದ ಉದ್ಘಾಟನೆ, ಬಾಲಕ ರಾಮನ ಮೂರ್ತಿಯನ್ನು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿರುವ ಸಂದರ್ಭದಲ್ಲಿ ಬಾಲಕರಾಮನ ಮೂರ್ತಿಯನ್ನು ವರ್ಣಿಸುವ ಪ್ರಪ್ರಥಮ ಸಂಸ್ಕೃತ ಶ್ಲೋಕ ಒಂದನ್ನು ಸಂಗೀತ ನಿರ್ದೇಶಕ ಮಹೇಶ್ ಮಹದೇವ್ ರಚಿಸಿ, ಸಂಗೀತ ಸಂಯೋಜಿಸಿ ಹೊರತಂದಿದ್ದಾರೆ ಇದನ್ನು ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿ ಸುಶ್ರಾವ್ಯವಾಗಿ ಹಾಡಿದ್ದಾರೆ.

“ಅಯೋಧ್ಯಾ ಬಾಲ ರಾಮ ಶ್ಲೋಕ” ಶೀರ್ಷಿಕೆಯಲ್ಲಿ ಹೊರತಂದಿರುವ ಈ ಶ್ಲೋಕದ ವಿಡಿಯೋದಲ್ಲಿ ಅಯೋಧ್ಯೆಯಲ್ಲಿರುವ ರಾಮಲಲ್ಲಾ ವಿಗ್ರಹದ ವೈಭವ ಮತ್ತು ಸೌಂದರ್ಯವನ್ನು ವರ್ಣಿಸುವ ಪ್ರಯತ್ನವಾಗಿದೆ. ಶಾಸಕರು, ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಸಿ ಎನ್ ಅಶ್ವಥನಾರಾಯಣರವರು ಈ ಶ್ಲೋಕವನ್ನು ಕೇಳಿ, ಬಿಡುಗಡೆಗೊಳಿಸಿ ಶ್ಲೋಕ ಅತ್ಯದ್ಭುತವಾಗಿ ಮೂಡಿಬಂದಿದೆಯೆಂದು ಶುಭಕೋರಿ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲ ತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಶ್ಲೋಕವು ಲಕ್ಷಾಂತರ ರಾಮಭಕ್ತರು ವೀಕ್ಷಿಸಿದ್ದು ಸಾಕಷ್ಟು ವೈರಲ್ ಆಗುತ್ತಿದೆ