Monday, 16th September 2024

ಜ.2ಕ್ಕೆ ಮತಾಂತರ ನಿಷೇಧ ಕಾನೂನು ಜಾರಿ ಕುರಿತು ‘ಸುಪ್ರೀಂ’ ವಿಚಾರಣೆ

ವದೆಹಲಿ: ಅಂತರಧರ್ಮೀಯ ವಿವಾಹಕ್ಕಾಗಿ ಮತಾಂತರಗೊಳ್ಳುವುದನ್ನು ನಿಯಂತ್ರಿ ಸುವ ಉದ್ದೇಶದಿಂದ ಕೆಲ ರಾಜ್ಯಗಳು ಕಾನೂನು ಜಾರಿಗೊಳಿಸಿದ್ದು, ಇವುಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಜನವರಿ 2ರಂದು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಒಳಪಡಿಸಲಿದೆ.

ವಕೀಲ ವಿಶಾಲ್‌ ಠಾಕ್ರೆ ಹಾಗೂ ‘ಸಿಟಿಜನ್‌ ಫಾರ್‌ ಜಸ್ಟಿಸ್‌ ಅಂಡ್‌ ಪೀಸ್‌’ ಹೆಸರಿನ ಸ್ವಯಂ ಸೇವಾ ಸಂಸ್ಥೆಯು (ಎನ್‌ಜಿಒ) ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ಇವುಗಳ ವಿಚಾರಣೆ ನಡೆಸಲಿದೆ.

ಈ ಕಾನೂನುಗಳ ಅಡಿಯಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ‘ಜಮೈತ್‌ ಉಲೆಮಾ-ಐ-ಹಿಂದ್‌’ ಸಂಘಟನೆ ಸಲ್ಲಿಸಿರುವ ಅರ್ಜಿಯನ್ನೂ ಕೋರ್ಟ್‌ ವಿಚಾ ರಣೆಗೆ ಒಳಪಡಿಸಲಿದೆ.

ಉತ್ತರ ಪ್ರದೇಶ ಸರ್ಕಾರವು ‘ಕಾನೂನುಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ-2020’ ಹಾಗೂ ಉತ್ತರಾಖಂಡ ಸರ್ಕಾರವು ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2018’ನ್ನು ಜಾರಿಗೊಳಿಸಿದ್ದವು.
Read E-Paper click here