Sunday, 8th September 2024

ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಕರೋನಾದಿಂದಾಗಿ ದೇಶ ನಲುಗುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸುರಕ್ಷಿತವಲ್ಲ ಎಂಬ ತಜ್ಞರ ತೀರ್ಮಾನದ ಹಿನ್ನೆಲೆಯಲ್ಲಿ ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಶಿಕ್ಷಣ ಸಚಿವರು ಹಾಗೂ ಸಿಬಿಎಸ್‍ಇ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳ ಲಾಗಿದೆ.

ನವದೆಹಲಿ , ಮಹಾರಾಷ್ಟ್ರ , ಉತ್ತರ ಪ್ರದೇಶ, ಪಂಜಾಬ್ , ಕರ್ನಾಟಕದಲ್ಲಿ ಅತಿ ಹೆಚ್ಚು ಸಿಬಿಎಸ್‍ಇ ವಿದ್ಯಾರ್ಥಿಗಳಿದ್ದು , ಈ ರಾಜ್ಯಗಳಲ್ಲಿ ಕರೋನಾ ಸೋಂಕು ಉಲ್ಬಣಿಸುತ್ತಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅಪಾಯಕಾರಿ ಎಂಬ ಮಾಹಿತಿಗಳು ಬಂದಿದ್ದವು.

ವಿದ್ಯಾರ್ಥಿಗಳು ಮಾಸಿಕ ಪರೀಕ್ಷೆಗಳಲ್ಲಿ ತೆಗೆದುಕೊಂಡಿರುವ ಅಂಕಗಳನ್ನು ಪರಿಶೀಲಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಏ. 15ರಿಂದ ಪರೀಕ್ಷೆಗಳು ಆರಂಭಗೊಳ್ಳ ಬೇಕಾಗಿತ್ತು. ಇದಕ್ಕಾಗಿ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. 12ನೆ ತರಗತಿ ಪರೀಕ್ಷೆ ಬಗ್ಗೆ ಸದ್ಯದಲ್ಲಿಯೇ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ಮೇ 4ರಿಂದ ಜೂ.1ರವರೆಗೆ ನಡೆಯಬೇಕಾಗಿದ್ದ 12ನೆ ತರಗತಿ ಪರೀಕ್ಷೆ ಈಗ ಮುಂದೂಡಲಾಗಿದೆ.

ಕರ್ನಾಟಕದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿನ ವ್ಯತ್ಯಾಸದಿಂದಾಗಿ ನಿಗದಿ ಯಾಗಿದ್ದ ಬೆಂಗಳೂರು ನಗರ ವಿಶ್ವವಿದ್ಯಾ ನಿಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ, ಏ.16ರಿಂದ ನಿಗದಿ ಯಾಗಿರುವಂತೆ ಪರೀಕ್ಷೆಗಳು ನಡೆಯುತ್ತವೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!