Wednesday, 27th November 2024

Term Insurance Plan: ಟರ್ಮ್‌ ಇನ್ಸೂರೆನ್ಸ್‌ನ ಟಾಪ್‌ 10 ಪ್ರಯೋಜನಗಳಿವು

Term Insurance Plan

ಹೆಚ್ಚುತ್ತಿರುವ ಜೀವನ ವೆಚ್ಚ, ಹಣಕಾಸಿನ ಅಗತ್ಯತೆಗಳ ಕಾರಣದಿಂದ ವಿಮೆ ಇಂದು ಎಲ್ಲರಿಗೂ ಮುಖ್ಯವಾಗಿದೆ. ಹಲವಾರು ರೀತಿಯ ವಿಮಾ ಯೋಜನೆಗಳಿದ್ದರೂ ಅವಧಿ ವಿಮೆಯಲ್ಲಿ (Term Insurance Plan) ಹೂಡಿಕೆ (investment) ಮಾಡಲು ಎಲ್ಲರೂ ಬಯಸುತ್ತಾರೆ. ಆದರೆ ಇದರಲ್ಲಿ ಹೂಡಿಕೆ ಮಾಡುವ ಮೊದಲು ಇದರ ಹತ್ತು ಪ್ರಯೋಜನಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದ ಬಳಿಕ ಎಲ್ಲರಿಗೂ ಹಣಕಾಸಿನ ಅವಶ್ಯಕತೆ ಎಲ್ಲರಿಗೂ ಹೆಚ್ಚಾಗುತ್ತಲೇ ಇರುತ್ತದೆ. ಹೀಗಾಗಿ ವೃತ್ತಿ ಜೀವನದ ಬೆಳವಣಿಗೆಯನ್ನು ಸಮತೋಲನಗೊಳಿಸುವುದು ಬಹುಮುಖ್ಯ. ಸಾಲಗಳನ್ನು ನಿರ್ವಹಿಸುವ ಜೊತೆಗೆ ಭವಿಷ್ಯದ ಗುರಿಗಳಿಗಾಗಿ ಯೋಜನೆ ರೂಪಿಸಬೇಕಾಗುತ್ತದೆ.

ಆರ್ಥಿಕ ಯೋಗಕ್ಷೇಮದ ಪ್ರಮುಖ ಅಂಶಗಳನ್ನು ನಿರ್ಲಕ್ಷಿಸಿದರೆ ಜೀವನಕ್ಕೆ ಸಂಪೂರ್ಣ ರಕ್ಷಣೆ ಕೊಡುವುದು ಕಷ್ಟ. ಆದರೆ ಅವಧಿ ವಿಮೆಯನ್ನು ಅರ್ಥ ಮಾಡಿಕೊಂಡು ಹೂಡಿಕೆ ಮಾಡುವುದರಿಂಅ ಆರ್ಥಿಕ ಭದ್ರತೆಗೆ ಪ್ರಮುಖ ಆಧಾರಸ್ತಂಭವನ್ನು ಒದಗಿಸದಂತಾಗುತ್ತದೆ.

ಅವಧಿ ವಿಮೆಯನ್ನು ಖರೀದಿ ಮಾಡುವುದು ಯಾಕೆ ಮುಖ್ಯ?

ಎಲ್ಲರ ಜೀವನವೂ ಇಂದು ಅನಿಶ್ಚಿತವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅವಧಿ ವಿಮೆ ಖರೀದಿ ಮಾಡಲು ಪರಿಗಣಿಸಲೇ ಬೇಕಾದ ಹತ್ತು ಪ್ರಮುಖ ಕಾರಣಗಳಿವೆ.

Term Insurance Plan

ಅವಲಂಬಿತರಿಗೆ ಆರ್ಥಿಕ ರಕ್ಷಣೆ

ಪ್ರತಿಯೊಬ್ಬರ ಜೀವನದಲ್ಲೂ ಒಂದಿಬ್ಬರಾದರೂ ಅವಲಂಬಿತರು ಇರುತ್ತಾರೆ. ಅವಧಿ ವಿಮೆಯು ಅನಿರೀಕ್ಷಿತ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ತಕ್ಷಣಕ್ಕೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ. ಗೃಹ, ವೈಯಕ್ತಿಕ ಸಾಲಗಳಂತಹ ಬಾಕಿ ಇರುವ ಸಾಲಗಳನ್ನು ಪಾವತಿಸಲು ಸಹಾಯ ಮಾಡುತ್ತದೆ. ಹಾಗೆಯೇ ಬಾಡಿಗೆ, ದಿನಸಿ ಮತ್ತು ಉಪಯುಕ್ತತೆಯ ಬಿಲ್‌ಗಳಂತಹ ದೈನಂದಿನ ಜೀವನ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ತಕ್ಷಣದ ಅಗತ್ಯಗಳನ್ನು ಹೊರತು ಪಡಿಸಿ ಕುಟುಂಬದ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು, ಮಕ್ಕಳ ಶಿಕ್ಷಣ ಅಥವಾ ಭವಿಷ್ಯದ ಹೂಡಿಕೆಗಳನ್ನು ಯಾವುದೇ ಒತ್ತಡವಿಲ್ಲದೆ ಮುಂದುವರಿಸಲು ಸಹಾಯ ಮಾಡುತ್ತದೆ.

ಅಪಾಯಗಳ ವಿರುದ್ಧ ರಕ್ಷಣೆ

ಆರೋಗ್ಯ ಸಂಬಂಧಿತ ಪ್ರಕರಣಗಳಲ್ಲಿ ಆರ್ಥಿಕ ಭದ್ರತೆಯನ್ನು ನೀಡಲು ಅವಧಿ ವಿಮೆ ಸಹಾಯ ಮಾಡುತ್ತದೆ. ಯಾವುದೇ ರೋಗನಿರ್ಣಯದ ಅನಂತರ ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು ಇದು ಸಹಾಯ ಮಾಡುತ್ತದೆ. ಚೇತರಿಕೆಯ ಸಮಯದಲ್ಲಿ ಹಣಕಾಸಿನ ನೆರವು ಒದಗಿಸುತ್ತದೆ.

ವೆಚ್ಚ ಕಡಿಮೆ

ಅವಧಿ ವಿಮೆ ಯೋಜನೆಯಲ್ಲಿ ಸಣ್ಣ ವಯಸ್ಸಿನಲ್ಲೇ ಹೂಡಿಕೆ ಮಾಡಲು ಪ್ರಾರಂಭಿಸುವುದರಿಂದ ಕಡಿಮೆ ಪ್ರೀಮಿಯಂ ಪಾವತಿ ಮಾಡಬಹುದು. ಇದರಿಂದ ಆದಾಯದ ಸಣ್ಣ ಭಾಗವಷ್ಟೇ ವಿಮೆಯಲ್ಲಿ ಉಳಿತಾಯವಾದರೂ ದೀರ್ಘಾವಧಿಯ ಪ್ರಯೋಜನವನ್ನು ಕೊಡುತ್ತದೆ. ಸಾಮಾನ್ಯವಾಗಿ ಪ್ರೀಮಿಯಂಗಳನ್ನು ವಯಸ್ಸು ಮತ್ತು ಆರೋಗ್ಯದಿಂದ ನಿರ್ಧರಿಸಲಾಗುತ್ತದೆ. ಕಡಿಮೆ ದರದ ಪ್ರೀಮಿಯಂ ಪಾಲಿಸಿಯ ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ. ಇದು ಕೈಗೆಟುಕುವ ವೆಚ್ಚದಲ್ಲಿ ಅತ್ಯುತ್ತಮವಾದ ಕವರೇಜ್ ಅನ್ನು ಪಡೆಯಲು ಸಹಾಯ ಮಾಡುತ್ತದೆ.

ಬಾಕಿ ಸಾಲಗಳಿಗೆ ಕವರೇಜ್

ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಾಲದ ಜವಾಬ್ದಾರಿ ಮಕ್ಕಳ ಮೇಲಿರುತ್ತದೆ. ವಿದ್ಯಾರ್ಥಿ ಸಾಲ, ಕ್ರೆಡಿಟ್ ಕಾರ್ಡ್ ಸಾಲ ಮತ್ತು ಗೃಹ ಸಾಲಗಳಂತಹ ಮಹತ್ವದ ಹಣಕಾಸಿನ ಜವಾಬ್ದಾರಿಗಳನ್ನು ಹೆಚ್ಚಿನವರು ಸಣ್ಣ ವಯಸ್ಸಿನಲ್ಲೇ ಹೊರಬೇಕಾಗುತ್ತದೆ. ಇದು ಹಣಕಾಸಿನ ಅವಲಂಬಿತರ ಆರ್ಥಿಕ ಭವಿಷ್ಯದ ಮೇಲೆ ಭಾರೀ ಹೊರೆಯನ್ನು ಉಂಟುಮಾಡಬಹುದು. ಅಕಾಲಿಕ ಮರಣದ ಸಂದರ್ಭದಲ್ಲಿ ಈ ಸಾಲಗಳಿಂದ ಅವಲಂಬಿತರು ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಇದು ಕಷ್ಟದ ಸಮಯದಲ್ಲಿ ಭಾವನಾತ್ಮಕ ಮತ್ತು ಆರ್ಥಿಕ ಒತ್ತಡವನ್ನು ಉಂಟು ಮಾಡುತ್ತದೆ.

ಅವಧಿ ವಿಮೆಯು ಈ ಬಾಕಿ ಸಾಲಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಅವಲಂಬಿತರು ಆರ್ಥಿಕ ಹೊರೆಯಿಂದ ಮುಕ್ತರಾಗಬಹುದು. ಇದು ಹಣಕಾಸಿನ ಒತ್ತಡಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಚೇತರಿಸಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.

ವೈಯಕ್ತಿಕ ಪ್ರಯೋಜನ ಹೆಚ್ಚು

ಸಾಮಾನ್ಯವಾಗಿ ಉದ್ಯೋಗದಾತ ಕಂಪನಿಗಳು ತನ್ನ ಎಲ್ಲ ಸಿಬ್ಬಂದಿಗೂ ವಿಮೆಯನ್ನು ಒದಗಿಸುತ್ತವೆ. ಇದು ಮೌಲ್ಯಯುತವಾಗಿದ್ದರೂ ವೈಯಕ್ತಿಕ ಅಗತ್ಯಗಳಿಗೆ ಸಾಕಷ್ಟು ವ್ಯಾಪ್ತಿಯನ್ನು ನೀಡುವುದಿಲ್ಲ. ಉದ್ಯೋಗಗಳನ್ನು ಬದಲಾಯಿಸಿದಾಗ ಅಥವಾ ಉದ್ಯೋಗವನ್ನು ತೊರೆದಾಗ ಇದು ಸಾಮಾನ್ಯವಾಗಿ ಕೊನೆಗೊಳ್ಳುತ್ತದೆ. ಹೆಚ್ಚಿನವರು ಉದ್ಯೋಗದಲ್ಲಿ ಇದ್ದಾಗ ಗುಂಪು ವಿಮೆ ಸಾಕು ಎಂದು ಭಾವಿಸುತ್ತಾರೆ. ಇದರೊಂದಿಗೆ ವೈಯಕ್ತಿಕ ಅವಧಿಯ ಯೋಜನೆಯನ್ನು ತೆಗೆದುಕೊಂಡರೆ ಸಂದರ್ಭಗಳಿಗೆ ಅನುಗುಣವಾಗಿ ಹೆಚ್ಚುವರಿ ಆರ್ಥಿಕ ಭದ್ರತೆಯನ್ನು ಪಡೆಯಬಹುದು.

ಖರೀದಿ ಪ್ರಕ್ರಿಯೆ ಸುಲಭ

ಅವಧಿ ವಿಮೆ ಯೋಜನೆಗಳನ್ನು ಖರೀದಿ ಮಾಡುವುದು ಸುಲಭ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕವೂ ಅವಧಿ ಜೀವ ವಿಮೆಯನ್ನು ಖರೀದಿಸಬಹುದು. ಇದು ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

ವ್ಯಾಪ್ತಿ ಹೆಚ್ಚಿಸುವ ಆಯ್ಕೆ

ಕೆಲವು ಯೋಜನೆಗಳು ಹೆಚ್ಚಿನ ಕವರೇಜ್ ಅನ್ನು ಹಣದುಬ್ಬರಕ್ಕೆ ಸರಿಹೊಂದಿಸುವ ಆಯ್ಕೆಯನ್ನು ನೀಡುತ್ತವೆ. ಇದರಿಂದ ಕಾಲಾನಂತರದಲ್ಲಿ ವಿಮಾ ಮೊತ್ತವು ಬೆಳೆಯುತ್ತದೆ. ಇದು ಜೀವನ ವೆಚ್ಚವನ್ನು ಸರಿದೂಗಿಸಲು ಕಾಲಾನಂತರದಲ್ಲೂ ಸಹಾಯ ಮಾಡುತ್ತದೆ.

Term Insurance Plan

ಬದಲಿ ಆದಾಯ

ಮನೆಯ ಆದಾಯದ ಮೂಲ ನೀವೇ ಆಗಿದ್ದರೆ ನೀವು ಇಲ್ಲದೇ ಇದ್ದಾಗಲೂ ಅವಲಂಬಿತರಿಗೆ ಅವಧಿ ವಿಮೆ ಯೋಜನೆಯು ಬದಲಿ ಆದಾಯವಾಗಿ ಕಾರ್ಯನಿರ್ವಹಿಸುತ್ತದೆ. ಈ ಹಣಕಾಸಿನ ಬೆಂಬಲದಿಂದ ಕುಟುಂಬವು ಬಾಡಿಗೆ ಅಥವಾ ಸಾಲಗಳನ್ನು, ಅಗತ್ಯ ಬಿಲ್‌, ಶಿಕ್ಷಣ ವೆಚ್ಚ, ಆರೋಗ್ಯ ವೆಚ್ಚಗಳಂತಹ ಮುಂದುವರಿಸಿಕೊಂಡು ಹೋಗಲು ಸಹಾಯ ಮಾಡುತ್ತದೆ. ದುಡಿಯುವವರು ಇಲ್ಲದೇ ಇದ್ದಾಗಲೂ ಅವರು ತಮ್ಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ತೆರಿಗೆ ಪ್ರಯೋಜನ

ಅವಧಿ ಜೀವ ವಿಮಾ ಯೋಜನೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಹೊಂದಿವೆ. ಇದು ಪಾಲಿಸಿದಾರರಿಗೆ ವಾರ್ಷಿಕವಾಗಿ 1.5 ಲಕ್ಷ ರೂ. ವರೆಗೆ ಕಡಿತಗಳನ್ನು ಪಡೆಯಲು ಅವಕಾಶ ನೀಡುತ್ತದೆ. ಹೆಚ್ಚುವರಿಯಾಗಿ ಫಲಾನುಭವಿಗಳು ಪಡೆದ ಮರಣದ ಪ್ರಯೋಜನವು ಸಾಮಾನ್ಯವಾಗಿ ಸೆಕ್ಷನ್ 10(10ಡಿ) ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ.

UPI Payment: ಯುಪಿಐ ಮೂಲಕವೇ ಇನ್ನು ಬ್ಯಾಂಕ್‌‌ಗಳಲ್ಲಿ ಫಿಕ್ಸ್ಡ್ ಡಿಪಾಸಿಟ್‌‌ ಇಡಬಹುದು!

ನೆಮ್ಮದಿ

ಅವಧಿ ವಿಮೆ ಯೋಜನೆಯು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಯಾಕೆಂದರೆ ಇದು ಅವರ ಕುಟುಂಬಕ್ಕೆ ಬರುವ ಅಕಾಲಿಕ ಆರ್ಥಿಕ ಒತ್ತಡದ ಆತಂಕವನ್ನು ದೂರ ಮಾಡುತ್ತದೆ ಮತ್ತು ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತದೆ.