Saturday, 23rd November 2024

ಬಾಂಬ್ ಬೆದರಿಕೆ ಕರೆ: ದೆಹಲಿ ಏರ್‌ಪೋರ್ಟ್‌ಗೆ ಭದ್ರತೆ

ನವದೆಹಲಿ: ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ದೆಹಲಿ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಭದ್ರತೆ ಹೆಚ್ಚಿಸಲಾಗಿದೆ.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಾಮಧೇಯ ದೂರವಾಣಿ ಕರೆ ಬಂದಿದ್ದು, ಲಂಡನ್‌ಗೆ ಹೋಗುವ ಏರ್‌ ಇಂಡಿಯಾ ವಿಮಾನವನ್ನು ಸ್ಪೋಟಿಸುವ ಬೆದರಿಕೆ ಹಾಕಲಾಗಿದೆ. ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯಂತೆ ಲಂಡನ್‌ಗೆ ತೆರಳುವ ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲಂಡನ್‌ಗೆ ಹೋಗುವ ವಿಮಾನದ ಬಗ್ಗೆ ನಮಗೆ ಬಾಂಬ್ ಬೆದರಿಕೆ ಕರೆ ಬಂದಿತು. ಗುರುವಾರ ರಾತ್ರಿ ದೆಹಲಿಯ ಹೊರಗಿನ ರನ್‌ಹೋಲಾ ಪೊಲೀಸ್ ಠಾಣೆಯ ಲ್ಯಾಂಡ್‌ಲೈನ್‌ಗೆ ಕರೆ ಬಂದಿತ್ತು. ಅಮೆರಿಕದಲ್ಲಿ 9/11 ದಾಳಿ ಯಂತೆ ಲಂಡನ್‌ಗೆ ಹೋಗುವ ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಹಾಗೆಯೇ ದೆಹಲಿ ಏರ್‌ಪೋರ್ಟ್‌ಗೂ ಕೂಡ ಶುಕ್ರವಾರ ಬೆದರಿಕೆ ಕರೆ ಬಂದಿತ್ತು. 2001ರ ಸೆಪ್ಪೆಂಬರ್‌ 11 ರಂದು ನ್ಯೂಯಾರ್ಕ್‌ ಸಿಟಿ, ಅರ್ಲಿಂಗ್ಟನ್‌, ವರ್ಜಿನಿಯಾ, ಪೆನ್ಸಿಲ್ವೇನಿಯಾ ಮತ್ತು ಶಾಂಕ್ಸ್‌ವಿಲ್ಲೆಯಲ್ಲಿ 90 ದೇಶಗಳ 2,977 ಜನರು ಮೃತಪಟ್ಟಿದ್ದರು.

ಅಲ್​ಖೈದಾ ಭಯೋತ್ಪಾದಕ ಸಂಘಟನೆಯಿಂದ ಅಪಹರಿಸಲ್ಪಟ್ಟಿದ್ದ ಎರಡು ವಿಮಾನಗಳು ಕೇವಲ 102 ನಿಮಿಷಗಳ ಅವಧಿಯಲ್ಲಿ ಅವಳಿ ಗೋಪುರಗಳಿಗೆ ಅಪ್ಪಳಿಸಿದ್ದವು. ವಿಶ್ವದ ದೊಡ್ಡಣ್ಣ ಅಮೆರಿಕಾದ ಅವಳಿ ಗೋಪುರಗಳ ಮೇಲೆ ದಾಳಿ ನಡೆದು 20 ವರ್ಷಗಳು ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿದ್ದಾರೆ.

ದಾಳಿಯ ನಂತರ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಿದ ಭದ್ರತಾ ಪಡೆಗಳನ್ನು ಶ್ಲಾಘಿಸಿದರು. ಅಲ್‌ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು.

ಅಮೆರಿಕದ 4 ವಿಮಾನಗಳನ್ನೇ ಹೈಜಾಕ್ ಮಾಡಿದ್ದ ಅಲ್‌ಕೈದಾ ಸಂಘಟನೆ ಉಗ್ರರು, ಒಂದು ವಿಮಾನವನ್ನು ನ್ಯೂಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್ ಅವಳಿ ಗೋಪುರಕ್ಕೆ ಡಿಕ್ಕಿ ಹೊಡೆಸಿದ್ದರು. ಮತ್ತೊಂದು ವಿಅಮಾನ ಅಮೆರಿಕದ ಮಿಲಿಟರಿ ಪ್ರಧಾನ ಕಚೇರಿ ಪೆಂಟಗಾನ್‌ಗೆ ಡಿಕ್ಕಿ ಹೊಡೆದಿತ್ತು. ಈ ಉಗ್ರ ದಾಳಿಯಿಂದಾಗಿ ಅಮೆರಿಕದಲ್ಲಿ ಒಟ್ಟು 2977 ಅಮಾಯಕರು ಮೃತರಾಗಿದ್ದರು.