ಧರ್ಮಪುರಿ: ರಸ್ತೆ ಇಲ್ಲದಿರುವುದರಿಂದ ನಮ್ಮ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ಮನೆಯ ಮುಂದೆ ಹೆಲಿ ಕಾಪ್ಟರ್ ಲ್ಯಾಂಡ್ ಮಾಡಲು ಅನುಮತಿ ನೀಡುವಂತೆ ತಮಿಳುನಾಡಿನ ರೈತನೊಬ್ಬ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾನೆ.
ಗಣೇಶನ್ (57) ರೈತನ ಹೆಸರು. ತಮಿಳುನಾಡಿನ ಧರ್ಮಪುರಿ ಮೂಲದ ರೈತ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಮಾಡಿದ್ದಾರೆ.
ಅಂದಹಾಗೆ ಗಣೇಶನ್ ಕಿರಿಯ ಮಗಳು ಆಟಿಕೆ ಹೆಲಿಕಾಪ್ಟರ್ ಹೊಂದಿದ್ದರೆ, ಹಿರಿಯ ಮಗಳು ಹೆಲಿಕಾಪ್ಟರ್ ಫೋಟೋವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದು, ತನ್ನ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಗಣೇಶನ್ ಅವರು ಈ ವಿಭಿನ್ನ ಪ್ರಯತ್ನ ಮಾಡಿ ದ್ದಾರೆ.
ರಸ್ತೆ ಇಲ್ಲದಿರುವುದರಿಂದ ನಮ್ಮ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳೆದ 4 ತಿಂಗಳಿಂದ ಸಂಬಂಧಿಕರ ಮನೆಯಲ್ಲೇ ಉಳಿದಿದ್ದೇವೆ.
ರಸ್ತೆ ಇಲ್ಲದಿರುವ ಬಗ್ಗೆ ಪೊಲೀಸ್ ಮತ್ತು ಕಂದಾಯ ಇಲಾಖೆಗೆ ದೂರು ದಾಖಲಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಹಾಗಾಗಿ ಎಲ್ಲರ ಗಮನ ಸೆಳೆಯಲು ಈ ರೀತಿಯ ವಿಶೇಷ ಪ್ರಯತ್ನ ಮಾಡಿದೆ ಎಂದು ತಿಳಿಸಿದ್ದಾರೆ