Saturday, 27th July 2024

ಜೂನ್ 2023ರಿಂದ ನೀರೊಳಗಿನ ಮೆಟ್ರೋ ಪ್ರಯಾಣ ಆರಂಭ

ಕೋಲ್ಕತ್ತಾ: ಜೂನ್ 2023ರಿಂದ ದೇಶದಲ್ಲೇ ಮೊದಲ ಬಾರಿಗೆ ನೀರೊಳಗಿನ ಮೆಟ್ರೋ ಸೇವೆಯಲ್ಲಿ ಪ್ರಯಾಣ ಮಾಡಬಹುದು. ಈ ಅನುಭವ ಬೇಕು ಅಂದರೆ ನೀವು ಕೋಲ್ಕತ್ತಾಗೆ ಹೋಗಬೇಕಾಗುತ್ತದೆ.

ಕೋಲ್ಕತ್ತಾ ಮೆಟ್ರೋ ರೈಲು ಕಾರ್ಪೊರೇಷನ್ ಹೇಳಿಕೆ ನೀಡಿರುವಂತೆ, ಹೂಗ್ಲಿ ನದಿಯ ಕೆಳಭಾಗದಲ್ಲಿ ಕೋಲ್ಕತ್ತಾದ ಮೂಲಕ ಸಾಲ್ಟ್ ಲೇಕ್ ಅನ್ನು ಹೌರಾಕ್ಕೆ ಸಂಪರ್ಕಿಸುವ ಮೆಟ್ರೋ ಮಾರ್ಗವು ಪ್ರಸ್ತುತ 5ನೇ ಸೆಕ್ಟರ್ ಮತ್ತು ಸೀಲ್ದಾಹ್ ನಿಲ್ದಾಣಗಳ ನಡುವೆ ಕಾರ್ಯನಿರ್ವಹಿಸುತ್ತಿದೆ.

ಸೀಲ್ದಾಹ್‌ನಿಂದ ಹೌರಾ ಮೈದಾನದವರೆಗಿನ ಮೆಟ್ರೋ ಸೇವೆ ಜೂನ್ 2023ರ ವೇಳೆಗೆ ಕಾರ್ಯಾರಂಭ ಮಾಡುವ ಗುರಿ ಹೊಂದಿದೆ ಎಂದು ಕೆಎಂಆರ್‌ಸಿ ಹೇಳಿದೆ.

ನೀರೊಳಗಿನ ಮೆಟ್ರೋ ಹೂಗ್ಲಿ ನದಿಯ ಕೆಳಗೆ 500 ಮೀಟರ್ ದೂರ ಚಲಿಸು ತ್ತದೆ. ಇದು ಕೋಲ್ಕತ್ತಾದ ಮೂಲಕ ಸಾಲ್ಟ್ ಲೇಕ್ ಅನ್ನು ಹೌರಾಕ್ಕೆ ಸಂಪರ್ಕಿಸು ತ್ತದೆ.

ಯೋಜನೆಯ ಒಟ್ಟು 16.55 ಕಿಮೀ ಉದ್ದದಲ್ಲಿ, 5ನೇ ಸೆಕ್ಟರ್ ಮತ್ತು ಸೀಲ್ಡಾ ನಡುವಿನ 9.30 ಕಿಲೋ ಮೀಟರ್ ಉದ್ದದ ಮಾರ್ಗ ದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಪೂರ್ವ-ಪಶ್ಚಿಮ ಮೆಟ್ರೋ ಲಿಂಕ್ ಕೋಲ್ಕತ್ತಾ ಮತ್ತು ಹೌರಾ ವನ್ನು ಸಂಪರ್ಕಿಸಿದರೆ, ಇದು 2035 ರ ವೇಳೆಗೆ 10 ಲಕ್ಷ ಪ್ರಯಾಣಿಕ ರಿಗೆ ಸೇವೆ ನೀಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆಟ್ರೋ ರೈಲು ಸೇವೆಯ ಆರಂಭವು ಲಕ್ಷಾಂತರ ಪ್ರಯಾಣಿಕರಿಗೆ ವರದಾನವಾಗಲಿದೆ. ಕೋಲ್ಕತ್ತಾದಲ್ಲಿನ ಗ್ರೀನ್ ಲೈನ್ ಪೂರ್ವ ಕೋಲ್ಕತ್ತಾದಲ್ಲಿ 5ನೇ ಸೆಕ್ಟರ್ ಮತ್ತು ಫೂಲ್ಬಗಾನ್ ನಡುವೆ 6. 97 ಕಿಮೀ ದೂರವನ್ನು ಒಳಗೊಂಡಿದೆ.

error: Content is protected !!