ಮುಂಬೈ: ವಿಶಿಷ್ಟವಾದ ಫ್ಯಾಶನ್ ನಿಂದಲೇ ಸುದ್ದಿಯಲ್ಲಿರುವ ನಟಿ, ಮಾಡೆಲ್ ಉರ್ಫಿ ಜಾವೇದ್ (Urfi Javed) ಈಗ ತಮ್ಮ ಐಕಾನಿಕ್ 3ಡಿ ಬಟರ್‌ಫ್ಲೈ ಉಡುಗೆಯನ್ನು 3.66 ಕೋಟಿ ರೂ. ಗೆ ಮಾರಾಟ ಮಾಡುವುದಾಗಿ ಘೋಷಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral News) ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟಿಜನ್‌ಗಳು ಇದರಲ್ಲಿ ನಾವು 3 ಬಿಎಚ್‌ಕೆ ಮನೆ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ.
ಉರ್ಫಿ ಜಾವೇದ್ ಅವರು ತಮ್ಮ ಐಕಾನಿಕ್ 3ಡಿ ಬಟರ್‌ಫ್ಲೈ ಬಟ್ಟೆಯನ್ನು 3.66 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿದರು. ಅವರ ಘೋಷಣೆಯ ಅನಂತರ ಅನೇಕರು ಬೆಲೆ ಕೇಳಿ ದಂಗಾಗಿದ್ದಾರೆ. ಕೆಲವರು ಇದು ತಮಾಷೆಯಾಗಿದೆ ಎಂದು ಹೇಳಿದ್ದರೆ, ಇನ್ನು ಕೆಲವರು ಸಹೋದರಿ ಇಷ್ಟು ಮೊತ್ತದಲ್ಲಿ ಮುಂಬೈಯಲ್ಲಿ ಒಂದು ಫ್ಲಾಟ್ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು 50 ರೂ. ಕಡಿಮೆ ಇದೆ. ಇಲ್ಲವಾದರೆ ನಾನು ಖಂಡಿತಾ ತಗೋತಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಉರ್ಫಿ ನವೆಂಬರ್ 30 ರಂದು ಶನಿವಾರ ತಮ್ಮ ಐಕಾನಿಕ್ 3ಡಿ ಬಟರ್‌ಫ್ಲೈ ಡ್ರೆಸ್ ಅನ್ನು 3.66 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿದರು. ಆಫ್ ಶೋಲ್ಡರ್ ಇರುವ ಈ ಬಟ್ಟೆಯ ವಿಶಿಷ್ಟ ಲಕ್ಷಣವೆಂದರೆ ಕೃತಕ ಚಿಟ್ಟೆಗಳು. ಚಪ್ಪಾಳೆ ತಟ್ಟಿದಾಗ ಹೂವುಗಳಿಂದ ಹೊರಬರುವಂತೆ ಕಾಣಿಸಿಕೊಳ್ಳುತ್ತವೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಹಾಯ್ ಮೈ ಲವ್ಲೀಸ್.. ನಾನು ನನ್ನ ಬಟರ್‌ಫ್ಲೈ ಡ್ರೆಸ್ ಅನ್ನು ಮಾರಾಟ ಮಾಡಲು ನಿರ್ಧರಿಸಿದೆ. ಅದು ಎಲ್ಲರಿಗೂ ತುಂಬಾ ಇಷ್ಟವಾಯಿತು. ಇದರ ಬೆಲೆ 3,66,90,000 ರೂ. ಮಾತ್ರ ಎಂದು ಹೇಳಿದ್ದಾರೆ.
ಉರ್ಫಿ ಅವರ ಈ ಉಡುಪನ್ನು ಮೆಟಲ್ ಬೆಂಡರ್ ಸ್ಟುಡಿಯೋದ ಸುರಭ್ ಸಿಂಗ್ ರಾವತ್ ಅವರು ಶ್ವೇತಾ ಗುರ್ಮೀತ್ ಕೌರ್ ಮತ್ತು ಉರ್ಫಿ ಅವರ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ್ದಾರೆ. ಇದು ಸಾಕಷ್ಟು ಮಂದಿಯನ್ನು ಆಕರ್ಷಿಸಿದೆ. ಉರ್ಫಿ ಅವರ ಪ್ರಕಟಣೆಗೆ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಅನೇಕರು ಬೆಲೆ ಕೇಳಿ ದಂಗಾಗಿದ್ದಾರೆ. ಇನ್ನು ಕೆಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದ್ದಾರೆ.
ಒಬ್ಬ ಬಳಕೆದಾರ ಐಎಂಐ ಸಿಗುತ್ತಾ ಎಂದು ಕೇಳಿದ್ದರೆ, ಇನ್ನೊಬ್ಬರು ಹಳೆ ಡ್ರೆಸ್ ಇಷ್ಟು ದುಬಾರಿ. ಹೊಸದಾಗಿದ್ದರೆ ಯೋಚಿಸುತ್ತಿದ್ದೆ ಎಂದು ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಂಡ ಫಾಲೋ ಕಾರ್ ಲೋ ಯಾರ್ ಎಂಬ ಶೀರ್ಷಿಕೆಯ ಶೋನಲ್ಲಿ ಉರ್ಫಿ ಕಾಣಿಸಿಕೊಂಡಿದ್ದರು. ಒಂಬತ್ತು ಸರಣಿಯ ಈ ಶೋ ನಲ್ಲಿ ಅವರ ಜೀವನದ ಮೇಲೆ ಬೆಳಕು ಚೆಲ್ಲಲಾಗಿತ್ತು.