ನವದೆಹಲಿ: ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ವಿನಯ್ ಕುಮಾರ್ ತ್ರಿಪಾಠಿ ಅವರನ್ನು ನೇಮಿಸಲು ಸಂಪುಟ ನೇಮಕಾತಿ ಸಮಿತಿ (ಎಸಿಸಿ) ಅನುಮೋದನೆ ನೀಡಿದೆ.
ತ್ರಿಪಾಠಿ ಅವರು ಗೋರಖ್‌ಪುರದ ಈಶಾನ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುನೀತ್ ಶರ್ಮಾ ಅವರು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಸ್ಥಾನದಿಂದ ಶುಕ್ರವಾರ ನಿವೃತ್ತಿ ಪಡೆದರು. ಇದೀಗ ಅವರ ಸ್ಥಾನಕ್ಕೆ ತ್ರಿಪಾಠಿ ಅವರನ್ನು ನೇಮಕ ಮಾಡಲಾಗಿದೆ.