Monday, 16th September 2024

Vinesh Phogat Contest: ಪತಿಯ ಪೂರ್ವಜರ ಗ್ರಾಮದಿಂದ ವಿನೇಶ್‌ ಫೋಗಟ್‌ ಚುನಾವಣಾ ಪ್ರಚಾರ

ಚಂಡೀಗಢ: ಖ್ಯಾತ ಕುಸ್ತಿಪಟು(Wrestler) ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ವಿನೇಶ್‌ ಫೋಗಟ್‌(Congress Candidate Vinesh Phogat) ಅವರು ಇಂದಿನಿಂದ ತನ್ನ ಪತಿಯ ಪೂರ್ವಜರ ಗ್ರಾಮ ಬಕ್ತಾ ಖೇರಾ (Husband Ancestor Bakhta Khera) ಎಂಬಲ್ಲಿಂದ ಮುಂಬರುವ ವಿಧಾನಭೆ ಚುನಾವಣೆ ಪ್ರಚಾರ (VidhanaSabha Election Campaign) ಆರಂಭಿ ಸಲಿದ್ದಾರೆ.

ಇದಕ್ಕಾಗಿ ಇಂದಿನಿಂದಲೇ ಅಂದರೆ ಸೆ.8ರಿಂದಲೇ ಪ್ರಚಾರದಲ್ಲಿ ಧುಮುಕಲಿದ್ದಾರೆ. ಚುನಾವಣಾ ಪ್ರಚಾರದ ಭಾಗ ವಾಗಿ, 30ರ ಫೋಗತ್‌ ಅವರು, ಭಾನುವಾರ ರಾಠಿ ಸಮುದಾಯ (Rathi Community) ಏಳು ಖಾಪ್‌ ಪಂಚಾಯತ್‌ (Khap Panchayat) ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿನೇಶ್‌ ಫೋಗತ್‌ ಅವರು ಜುಲಾನಾ ವಿಧಾನ ಸಭೆ ಕ್ಷೇತ್ರ(Jhuana Vidhana Sabha Constituency) ದಿಂದ ಚುನಾವಣೆಗೆ ಸ್ಪರ್ಧಿಸು ತ್ತಿದ್ದಾರೆ. ಜುಲಾನಾ ನಗರವು ಹರ್ಯಾಣ (Haryana) ರಾಜ್ಯದ ಬಂಗಾರ್‌ ಎಂಬಲ್ಲಿದೆ.

ಇಲ್ಲಿ ಇಂಡಿಯನ್‌ ನ್ಯಾಷನಲ್‌ ಲೋಕ ದಲ್‌ (INLD) ಹಾಗೂ ಜನನಾಯಕ್‌ ಜನತಾ ಪಕ್ಷ(JJP)ದ ಹಿಡಿತವಿದೆ. ಈ ಉಭಯ ಪಕ್ಷಗಳು ಕಳೆದ 15 ವರ್ಷದಿಂದ ತನ್ನ ಅಧಿಪತ್ಯ ಮುಂದುವರಿಸಿಕೊಂಡು ಬಂದಿದೆ. 2009 ಹಾಗೂ 2014 ರಲ್ಲಿ ಇಂಡಿಯನ್‌ ನ್ಯಾಷನಲ್‌ ಲೋಕ ದಲ್‌ ಪಕ್ಷದಿಂದ ಪರ್ಮಿಂದರ್‌ ಸಿಗ್‌ (Perminder Singh) ಅವರು ಇಲ್ಲಿ ಜಯ ಸಾಧಿಸುತ್ತಲೇ ಬಂದಿದ್ದರು. ಬಳಿಕ 2019ರಲ್ಲಿ ಇಲ್ಲಿ ಜನನಾಯಕ್‌ ಜನತಾ ಪಕ್ಷದ ಅಮರ್ಜಿತ್‌ ಧಂಡಾ (Amarjeet Dhanda) ಅವರು ಗೆಲುವು ಸಾಧಿಸಿ ದ್ದರು.

ಕಾಂಗ್ರೆಸ್‌ ಪಕ್ಷಕ್ಕೆ ಕ್ರೀಡಾಪಟು ವಿನೇಶ್‌ ಫೋಗಟ್‌ ಅವರು ಜಾಟ್‌ ಸಮುದಾಯದ ಪ್ರತಿನಿಧಿಯಾಗಿದ್ದು, ಜುಲಾನಾ ವಿಧಾನಸಭಾ ಕ್ಷೇತ್ರ ಈಗ ಎಲ್ಲರ ಕೇಂದ್ರಬಿಂದುವಾಗಿದೆ.

ವಿನೇಶ್‌ ಅವರ ಮಾವ ರಾಜಪಾಲ್‌ ರಾಠಿ ಅವರು, ಚುನಾವಣಾ ಪ್ರಚಾರದ ವೇಳೆ, ಆರು ಗ್ರಾಮಗಳಾದ ಘರವಾಲಿ, ಖೇರಾ ಭಕ್ತಾ, ಜಮೋಲಾ, ಕರೇಲಾ, ಜಯ್‌ಜಯ್‌ವಂತಿ ಹಾಗೂ ಘೇರತಿಗಳನ್ನು ಪ್ರತಿನಿಧಿಸುವ ಛುಗಾಮಾ ಖಾಪ್‌ ಹಾಗೂ ರಾಠಿ ಸಮುದಾಯವಾಧ ಖಾಫ್‌ ಮನೆ ಮಗಳು ವಿನೇಶ್‌ ಫೋಗತ್‌ ಅವಧಿಗೆ ಸ್ವಾಗತ ಕೋರಲು ಸನ್ನದ್ದ ವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಶುಕ್ರವಾರ ಫೋಗತ್‌ ಅವರು ಸಹ ಆಟಗಾರ ಭಜರಂಗ್‌ ಪೂನಿಯಾ ಜತೆ ಕಾಂಗ್ರೆಸ್‌ ಪಕ್ಷಕ್ಕೆ (Congress Party) ಸೇರ್ಪಡೆ ಗೊಂಡರು. ಪಕ್ಷದಿಂದ ಬಿಡುಗಡೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇವರ ಹೆಸರು ಕೂಡ ಇತ್ತು.

ವಿನೇಶ್‌ ಅವರು ಬಿಜೆಪಿ ನಾಯಕ ಹಾಗೂ ಡಬ್ಕ್ಯುಐ (WFI) ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರು ವಿರುದ್ದ ಪ್ರತಿಭಟನೆ ನಡೆಸಿದವರಲ್ಲಿ ಮುಂಚೂಣಿಯಲ್ಲಿದ್ದರು. ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆ, ಫೋಗತ್‌ ಅವರು ಯಾವುದಕ್ಕೂ ಹೆದರಲ್ಲ ಹಾಗೂ ಮುಂದಿಟ್ಟ ಕಾಲನ್ನು ಹಿಂದೆ ಇಡಲ್ಲ ಎಂದು ಹೇಳಿದ್ದರು.

ಇದು ನನ್ನ ಹೊಸ ಇನ್ನಿಂಗ್ಸ್. ಮಹಿಳೆಯರಿಗೆ ಏನೇ ಸಮಸ್ಯೆಯಾದರೂ, ಅವರ ಪರ ನಿಲ್ಲುವ ಪಕ್ಷ ಯಾವತ್ತೂ ಅದು ಕಾಂಗ್ರೆಸ್‌ ಎಂದು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *