Tuesday, 3rd December 2024

Viral Video: ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ ʼಸಿಬಿಎಸ್‍ಇ ಟೆನ್ತ್‌ ಫೈಲ್ ಚಾಯ್ ವಾಲಾʼ ಅಂಗಡಿ; ಏನಿದರ ವಿಶೇಷತೆ?

Viral Video

ಉತ್ತರಪ್ರದೇಶ: ಉದರ ನಿಮಿತ್ತಂ ಬಹುಕೃತ ವೇಷಂ! ಎಂಬ ಮಾತಿದೆ. ಹೊಟ್ಟೆಪಾಡಿಗಾಗಿ ಜನ ನಾನಾ ತರಹದ ವೇಷ ಹಾಕುತ್ತಾರೆ. ಈಗಂತೂ ಸೋಶಿಯಲ್‌ ಮೀಡಿಯಾದ ಜಮಾನ! ಜನ ಏನೇ ಮಾಡಿದ್ರೂ ಅದು ತಕ್ಷಣವೇ ವೈರಲ್‌(Viral Video) ಆಗುತ್ತದೆ. ಇತ್ತೀಚೆಗಷ್ಟೇ ವಡಾ ಪಾವ್‌ ಮಾರಾಟಗಾರನೊಬ್ಬನ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈಗ ಲಕ್ನೋದ ಚಿಕ್ಕ ಹುಡುಗನೊಬ್ಬನ ಚಾಯ್‌ ಅಂಗಡಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಚಾಯ್‌ ಅಂಗಡಿಯ ಹೆಸರು ಕೂಡ ಎಲ್ಲರ ಕಣ್ಣನ್ನು ತನ್ನತ್ತ ಸೆಳೆಯುತ್ತಿದೆ.

ಉತ್ತರ ಪ್ರದೇಶದ ಲಕ್ನೋದ ಬೀದಿಗಳಲ್ಲಿ ಚಿಕ್ಕ ಹುಡುಗನೊಬ್ಬ ತನ್ನದೇ ಆದ ಚಹಾ ಅಂಗಡಿಯನ್ನು ಶುರುಮಾಡಿದ್ದಾನೆ. ಶಾಲೆಗೆ ಹೋಗದ ವಿದ್ಯಾರ್ಥಿಯೊಬ್ಬ ಒಂದು ಚಹಾ ಅಂಗಡಿಯನ್ನು ಸ್ಥಾಪಿಸಿ ಅದಕ್ಕೆ ” ಸಿಬಿಎಸ್‍ಇ ಟೆನ್ತ್ ಪೈಲ್ ಚಾಯ್ ವಾಲಾ” ಎಂದು ಹೆಸರು ನೀಡಿದ್ದಾನೆ. ಈ ಹೊಸ ಚಾಯ್ ವಾಲಾನ ವಿಡಿಯೊ  ಈಗ ಸೋಶಿಯಲ್ ಮೀಡಿಯಾದಲ್ಲಿ  ಹರಿದಾಡುತ್ತಿದೆ.

ವಿಡಿಯೊದಲ್ಲಿ ಅವನು ಶಾಲಾ ಸಮವಸ್ತ್ರವನ್ನು ಹೋಲುವ ಶರ್ಟ್ ಮತ್ತು ಟೈ ಧರಿಸಿ ಬಿಸಿ ಬಿಸಿ ಚಹಾ ಮಾಡಿ ಗ್ರಾಹಕರಿಗೆ ನೀಡುವ ವಿಡಿಯೊ ಸಖತ್‌ ವೈರಲ್‌ ಆಗಿದೆ.  ಈ ಚಾಯ್ ವಾಲಾ ತನ್ನ ಸ್ಟಾಲ್‍ನಲ್ಲಿ ಚಹಾ ಮಾಡುವ ದೃಶ್ಯವನ್ನು ಅನೇಕರು  ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ.  

ಚಹಾ ಮಾರಾಟಗಾರ ” ಸಿಬಿಎಸ್‍ಇ ಟೆನ್ತ್ ಫೈಲ್ ಚಾಯ್ ವಾಲಾ ” ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು,  ಅದರಲ್ಲಿ ಆತ ಚಹಾವನ್ನು ತಯಾರಿಸುವ ಮತ್ತು  ಚಹಾ ಪ್ರಿಯರಿಗೆ ಚಹಾ ನೀಡುವ ವಿಡಿಯೊಗಳನ್ನು ಅಪ್ಲೋಡ್ ಮಾಡುತ್ತಾನೆ. ಈ ವಿಡಿಯೊ  ವೈರಲ್ ಆಗುತ್ತಿದ್ದಂತೆ ಹಲವಾರು ಜನರು ಅವನ ಚಹಾ ಅಂಗಡಿಗೆ ಭೇಟಿ ನೀಡಿ ಅಲ್ಲಿ ಚಹಾ ಸೇವಿಸಿದ್ದಾರೆ. ವರದಿ ಪ್ರಕಾರ, ಆತನ ಟೀ ಸ್ಟಾಲ್ ಲಕ್ನೋದ ರುಮಿ ದರ್ವಾಜಾದ ಕ್ಲಾಕ್ ಟವರ್ ಬಳಿ ಇದೆ ಎನ್ನಲಾಗಿದೆ.

ಇದನ್ನೂ ಓದಿ:ಫ್ರೆಶರ್ಸ್ ಪಾರ್ಟಿ ವೇಳೆ ಟೀ ಶರ್ಟ್‌ ಬಿಚ್ಚಿ ಕುಣಿದ ವಿದ್ಯಾರ್ಥಿನಿ; ವಿಡಿಯೊ ವೈರಲ್‌ ಆಗ್ತಿದ್ದಂತೆ ನೆಟ್ಟಿಗರು ಫುಲ್‌ ಗರಂ!

ಚಹಾ ವಾಲಾ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಡಾಲಿ ಚಾಯ್ ವಾಲಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಚಾರಕ್ಕೆ ಭಾರೀ ಸುದ್ಧಿಯಾಗಿದ್ದರು. ಮೈಕ್ರೋಸಾಫ್ಟ್ ನ ಸಹ-ಸಂಸ್ಥಾಪಕ ಬಿಲಿಯನೇರ್ ಬಿಲ್ ಗೇಟ್ಸ್ ಆತನ ಅಂಗಡಿಯಲ್ಲಿ ಒಂದು ಕಪ್ ಚಹಾವನ್ನು ಕುಡಿದಿದ್ದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.