ಛತ್ತೀಸ್‌ಗಢ: ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮದುವೆಯಾದಂತಹ ನವ ಜೋಡಿಗಳ ಪೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮದುವೆ ಅಂದಾಗ ಹಲವು ರೀತಿಯ ಧಾರ್ಮಿಕ ಸಂಪ್ರದಾಯ ಪದ್ದತಿಗಳು ಇರುತ್ತದೆ. ಆದರೆ ಛತ್ತೀಸ್‌ಗಢದ ಜೋಡಿಯೊಂದು ಧಾರ್ಮಿಕ ಆಚರಣೆಗಳನ್ನು ಬದಿಗೆ ಸರಿಸಿ ಸಂವಿಧಾನಕ್ಕೆ ಗೌರವ ನೀಡುವ ಮೂಲಕ ಮದುವೆಯಾಗಿದ್ದಾರೆ. ಈ ವಿಶೇಷ ಮದುವೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ(Viral Video).
ವಧು ಮತ್ತು ವರರಾದ ಎಮಾನ್ ಲಾಹ್ರೆ ಮತ್ತು ಪ್ರತಿಮಾ ಲಹ್ರೆ ಡಾ.ಬಿ.ಆರ್ ಅವರ ಭಾವಚಿತ್ರದ ಮುಂದೆ ಜೀವನಪರ್ಯಂತ ಪರಸ್ಪರ ಒಬ್ಬರಿಗೊಬ್ಬರು ಸಹಬಾಳ್ವೆ ಜೀವನ ನಡೆಸುತ್ತೇವೆ ಎಂದು ವಾಗ್ದಾಣ ಮಾಡಿದ್ದಾರೆ. ಅಂಬೇಡ್ಕರ್, ಸಂವಿಧಾನ ಶಿಲ್ಪಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯಲ್ಲಿ ಅವರ ನಂಬಿಕೆಯನ್ನು ತೋರಿಸುವ ನಿಟ್ಟಿನಲ್ಲಿ ಈ ಜೋಡಿ ಈ ಪ್ರಯತ್ನಕ್ಕೆ ಮುಂದಾಗಿದೆ.
एक अनोखी शादी जिसमें न सात फेरे, न बैंड बाजा, बल्कि…
— IBC24 News (@IBC24News) December 20, 2024
#LatestNews | #CGNews | #Chhattisgarh | #Trending | #Pathalgaon pic.twitter.com/HyaQ0GSgZ6
ಸಾಂಪ್ರದಾಯಿಕ ಆಚರಣೆಗಳಿಗೆ ಗುಡ್‌ಬೈ
ವಧು ವರರು ತಮ್ಮ ಸಮುದಾಯದ ಸಾಂಪ್ರದಾಯಿಕ ಆಚರಣೆಗಳನ್ನು ಆಚರಿಸದೇ ಸಂಪ್ರದಾಯದಂತೆ ವೇದ ಮಂತ್ರ, ಪ್ರದಕ್ಷಿಣೆ ಮಾಡುವ ಯಾವುದೇ ವಿವಾಹ ಪದ್ಧತಿ ಅನುಸರಿಸದೇ ಬದಲಾಗಿ ಭಾರತೀಯ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಧು- ವರರು ಮದುವೆ ನಂಟಿನಲ್ಲಿ ಬಂಧಿಯಾದರು.
ಸಂವಿಧಾನದ ಮೇಲೆ ಏಕೆ ಪ್ರಮಾಣ ವಚನ ಸ್ವೀಕರಿಸಬೇಕು?
ವರ ಎಮಾನ್ ಲಾಹ್ರೆ ಈ ಬಗ್ಗೆ ಮಾತನಾಡಿದ್ದು ಇದು ಮುಖ್ಯವಾಗಿ ಮದುವೆಯ ದುಂದುವೆಚ್ಚಗಳನ್ನು ತಪ್ಪಿಸಲು ಅನಗತ್ಯ ಖರ್ಚು ತಪ್ಪಿಸುವ ಸುಲಭ ಮಾರ್ಗ ಎಂದಿದ್ದಾರೆ. ಅನೇಕರು ಈ ನವ ಜೋಡಿಗೆ ಶುಭ ಹಾರೈಸಿದ್ದು ಇದು ಮದುವೆಗೆ ಅರ್ಥಪೂರ್ಣ ವಿಧಾನ ಇವರಿಂದ ನಾವು ಸ್ಪೂರ್ತಿ ಪಡೆಯಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ನವ ಜೋಡಿಯ ಪೋಷಕರು,ಸಂಬಂಧಿಕರು ಅವರ ನಿರ್ಧಾರ ಬಗ್ಗೆ ಸಂತೋಷ ವ್ಯಕ್ತಪಡಿಸುವ ಜೊತೆಗೆ ನವದಂಪತಿಗಳಿಗೆ ತಮ್ಮ ಆಶೀರ್ವಾದ ಮಾಡಿದ್ದಾರೆ.
ಇದನ್ನು ಓದಿ:BBK 11: ಬಿಗ್ ಬಾಸ್ನಲ್ಲಿ ಡಬಲ್ ಎಲಿಮಿನೇಷನ್?: ಕುತೂಹಲ ಕೆರಳಿಸಿದ ವಾರದ ಕತೆ ಎಪಿಸೋಡ್