ಹೊಸದಿಲ್ಲಿ: ಯೂಟ್ಯೂಬ್ನಲ್ಲಿ ನಿರಾಹುವಾ ಮತ್ತು ಮಧು ಶರ್ಮಾ ಅವರ ‘ಪ್ಯಾಸ್ ತನ್ ಕಿ ಬುಜಾಜಾ’ ಹಾಡು ವೈರಲ್ (Viral Video) ಆಗಿದೆ. ಈ ಹಾಡಿನ ವಿಡಿಯೊದಲ್ಲಿ ನಿರಾಹುವಾ ಮತ್ತು ಮಧು ಶರ್ಮಾ ನಡುವಿನ ಕೆಮಿಸ್ಟ್ರಿ ಆಕರ್ಷಕವಾಗಿ ಕಾಣುತ್ತದೆ. ಹಾಗಾಗಿ ಈ ಜೋಡಿಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಭೋಜ್ಪುರಿ ಸೂಪರ್ ಸ್ಟಾರ್ ದಿನೇಶ್ ಲಾಲ್ ಯಾದವ್ ಎಲ್ಲರಿಗೂ ಚಿರಪರಿಚಿತರಾದ ನಟ. ನಿರಾಹುವಾ ಎಂದೇ ಪ್ರಖ್ಯಾತರಾದ ಈ ನಟ ಭೋಜ್ಪುರಿ ಉದ್ಯಮಕ್ಕೆ ಹೊಸ ಗುರುತನ್ನು ನೀಡಿದ್ದಾರೆ. ಪ್ರೇಕ್ಷಕರು ನಿರಾಹುವಾ ನಟನೆ ಮತ್ತು ಹಾಸ್ಯವನ್ನು ತುಂಬಾ ಇಷ್ಟಪಡುತ್ತಾರೆ. ನಿರಾಹುವಾ ಚಿತ್ರದ ಹೊಸ ಹಾಡು ಬಿಡುಗಡೆಯಾದಾಗ, ಅದು ಯಾವಾಗಲೂ ವೈರಲ್ ಆಗುತ್ತಿರುತ್ತದೆ. ಇದೀಗ ಯೂಟ್ಯೂಬ್ನಲ್ಲಿ ನಿರಾಹುವಾ ಮತ್ತು ಮಧು ಶರ್ಮಾ ಅವರ ‘ಪ್ಯಾಸ್ ತನ್ ಕಿ ಬುಜಾಜಾ’ ಹಾಡು ಟ್ರೆಂಡ್ ಆಗಿದೆ.
ನಿರಾಹುವಾ ಭೋಜ್ಪುರಿ ಇಂಡಸ್ಟ್ರಿಯಲ್ಲಿ ಅನೇಕ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ. ಅತ್ಯಂತ ಪ್ರಸಿದ್ಧ ನಟಿ ಅಮ್ರಪಾಲಿ ಅವರು ದಿನೇಶ್ ಲಾಲ್ ಯಾದವ್ಗೆ ಜೋಡಿಯಾಗಿದ್ದಾರೆ. ಇದೀಗ ನಿರಾಹುವಾ ಮತ್ತು ನಟಿ ಮಧು ಶರ್ಮಾ ಅವರ ರೊಮ್ಯಾಂಟಿಕ್ ಹಾಡು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೇಗವಾಗಿ ಟ್ರೆಂಡಿಂಗ್ ಆಗಿದೆ. ಈ ಹಾಡಿನ ಹೆಸರು ‘ಪ್ಯಾಸ್ ತನ್ ಕೆ ಬುಜಾ ಜಾ’. ಈ ಹಾಡಿನ ವಿಡಿಯೊದಲ್ಲಿ, ನಿರಾಹುವಾ ಮತ್ತು ಮಧು ಶರ್ಮಾ ನಡುವಿನ ಕೆಮಿಸ್ಟ್ರಿ ಆಕರ್ಷಕವಾಗಿ ಕಾಣುತ್ತದೆ. ಹಾಗಾಗಿ ಇಬ್ಬರೂ ತಾರೆಯರ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸೂಪರ್ ಸ್ಟಾರ್ ನಿರಾಹುವಾ ಮತ್ತು ನಟಿ ಮಧು ಶರ್ಮಾ ‘ಪ್ಯಾಸ್ ತನ್ ಕೆ ಬುಜಾ ಜಾ’ನಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದ್ದಾರೆ. ಅವರ ನೃತ್ಯದ ವಿಡಿಯೊ ಹಳೆಯದಾಗಿದೆ ಆದರೆ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಪ್ರತಿಯೊಬ್ಬರೂ ಈ ಎರಡು ಜೋಡಿಗಳನ್ನು ತುಂಬಾ ಇಷ್ಟಪಡುತ್ತಾರೆ. ಹಾಡಿನ ವಿಡಿಯೊದಲ್ಲಿ ಮಧು ಶರ್ಮಾ ತುಂಬಾ ಸುಂದರವಾಗಿ ಕಾಣುತ್ತಾರೆ ಮತ್ತು ಮಧು ಶರ್ಮಾ ಮತ್ತು ನಿರಾಹುವಾ ಇಬ್ಬರು ಭಾರಿ ಮಳೆಯ ನಡುವೆ ರೊಮ್ಯಾಂಟಿಕ್ ಆಗಿ ನಟಿಸಿದ್ದಾರೆ.
ಈ ಹಾಡಿನಲ್ಲಿ ನಿರಾಹುವಾ ಮತ್ತು ಮಧು ಶರ್ಮಾ ಮಳೆಯಲ್ಲಿ ನೆನೆಯುತ್ತಾ ರೊಮ್ಯಾನ್ಸ್ ಮಾಡಿದ್ದಾರೆ. ಅವರಿಬ್ಬರನ್ನು ನೋಡಿದಾಗ, ಎಂತವರಲ್ಲಿಯೂ ಪ್ರೀತಿಯ ಮಾದಕತೆ ಹೆಚ್ಚಾಗುತ್ತದೆ.
ಇದನ್ನೂ ಓದಿ:ರಾಮಾಯಣ ನಾಟಕ ನಡೆಯುತ್ತಿದ್ದ ವೇದಿಕೆಯ ಮೇಲೆಯೇ ಹಂದಿಯನ್ನು ಕೊಂದು ಹಸಿ ಮಾಂಸ ತಿಂದ ನಟ! ವಿಡಿಯೊ ಇದೆ
ಈ ಹಾಡನ್ನು 1,741,445ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಹಾಡನ್ನು ಇಶ್ತಾರ್ ಭೋಜ್ಪುರಿ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮಧು ಶರ್ಮಾ ಮತ್ತು ನಿರಾಹುವಾ ನಡುವಿನ ಕೆಮಿಸ್ಟ್ರಿ ನೋಡಿದರೆ ಪ್ರೇಕ್ಷಕರು ಕಣ್ಣು ಮಿಟುಕಿಸಲು ಮರೆಯುತ್ತಾರೆ ಎನ್ನುವಂತಿದೆ.