Saturday, 28th December 2024

Viral Video: ರತನ್‌ ಟಾಟಾರ 7 ಅಡಿ ಐಸ್ ಕೇಕ್ ಪ್ರತಿಮೆ ರಚನೆ- ತಮಿಳುನಾಡಿನ ಬೇಕರಿಯಿಂದ ವಿಶೇಷ ಗೌರವ

Viral Video

ಚೆನ್ನೈ: ಭಾರತೀಯ ಉದ್ಯಮಿ ಹಾಗೂ ಸಾಧಕ ದಿವಂಗತ ರತನ್‌ ಟಾಟಾ (Ratan Tata) ಅವರು ಇಹಲೋಕ ತ್ಯಜಿಸಿ ಕೆಲವು ದಿನಗಳಾಗಿವೆ. ಇದೀಗ ತಮಿಳುನಾಡಿನ (Tamil Nadu) ಬೇಕರಿಯೊಂದು ವಿಶಿಷ್ಟ ಗೌರವ ಸಲ್ಲಿಸಿದೆ.  ತಮಿಳುನಾಡಿನ ಬೇಕರಿಯೊಂದು ರತನ್ ಟಾಟಾ ಮತ್ತು ಅವರ ನಾಯಿಯ 7 ಅಡಿ ಎತ್ತರದ ಐಸ್ ಕೇಕ್ ಪ್ರತಿಮೆಯನ್ನು ರಚಿಸಿದೆ. ತಮಿಳುನಾಡಿನ ಐಶ್ವರ್ಯ ಬೇಕರೀಸ್‌ ಪ್ರತಿ ವರ್ಷ ಕ್ರಿಸ್‌ಮಸ್ ಭಾಗವಾಗಿ ಪ್ರಮುಖ ವ್ಯಕ್ತಿಗಳ ಖಾದ್ಯ ಶಿಲ್ಪಗಳನ್ನು ತಯಾರು ಮಾಡುತ್ತದೆ. ಅದರಂತೆ ಈ ವರ್ಷ ರತನ್‌ ಟಾಟಾ ಹಾಗೂ ಅವರ ಸಾಕು ನಾಯಿಯ ಕೇಕ್‌ ಪ್ರತಿಮೆಯನ್ನು ತಯಾರು ಮಾಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್‌ ಆಗಿದ್ದು, (Viral Video) ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರು ಅಕ್ಟೋಬರ್ 9 ರಂದು ತಮ್ಮ 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ರತನ್‌ ಟಾಟಾ ಅವರು ಪ್ರಾಣಿ ಪ್ರಿಯರಾಗಿದ್ದು, ಪ್ರಾಣಿಗಳಿಗಾಗಿಯೇ ವಸತಿ , ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ಟಿಟೊ ಎಂಬ ಜರ್ಮನ್ ಶೆಫರ್ಡ್ ಮತ್ತು ಬೀದಿ ನಾಯಿಯನ್ನು ಸಾಕಿದ್ದರು.

ಇದೀಗ ರತನ್‌ ಟಾಟಾ ಅವರು ತಮ್ಮ ಪ್ರೀತಿಯ ನಾಯಿ ಟಿಟೊ ಜೊತೆ ಇರುವ ಕೇಕ್‌ ಮಾಡಲಾಗಿದೆ. ಸುಮಾರು ಏಳು ಅಡಿ ಉದ್ದದ ಐಸ್ ಕೇಕ್‌ನ್ನು ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದು, ಅದರಲ್ಲಿ ರತನ್‌ ಟಾಟಾ ಅವರು ನೀಲಿ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಅವರು ಬಾಯಿಯಲ್ಲಿ ಚೆಂಡನ್ನು ಹೊಂದಿರುವ ತನ್ನ ಮುದ್ದಿನ ನಾಯಿ ಟಿಟೊಗೆ ಕೈಕುಲುಕುತ್ತಿರುವುದನ್ನು ಕಾಣಬಹುದಾಗಿದೆ.

ಅಂತರ್ಜಾಲದಲ್ಲಿ ವೀಡಿಯೊ ಕಾಣಿಸಿಕೊಂಡ ನಂತರ, ಅನೇಕ ನೆಟ್ಟಿಗರು ಐಶ್ವರ್ಯಾ ಬೇಕರೀಸ್‌ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕಮೆಂಟ್‌ ಮಾಡಿ “ಒಳ್ಳೆಯ ಗೌರವ ಆದರೆ ನಾಯಿಮರಿ ಅಬ್ಬರಿಸಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ನಾಯಿಯನ್ನು “ಸ್ವಲ್ಪ ಭಯಾನಕ” ಎಂದು ಹೇಳಿದ್ದಾರೆ. ಈ ವಿಡಿಯೋ ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ 1.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 80,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

ರತನ್‌ ಟಾಟಾ ಅವರು ಪ್ರಾಣಿ ಪ್ರಿಯರು. ಅವರು ಗೋವಾಗೆ ಪ್ರಯಾಣಿಸುವಾಗ ಬೀದಿನಾಯಿಯನ್ನು ಕಂಡು ಅದನ್ನು ಮನೆಗೆ ತೆಗೆದುಕೊಂಡು ಬಂದಿದ್ದರು. ಟಾಟಾ ಒಮ್ಮೆ ತನ್ನ ಅನಾರೋಗ್ಯದ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ III ರೊಂದಿಗಿನ ಭೇಟಿಯನ್ನು ರದ್ದುಗೊಳಿಸಿದರು.

ಈ ಸುದ್ದಿಯನ್ನೂ ಓದಿ : Noel Tata: ಟಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕವಾದ ನೋಯೆಲ್ ಟಾಟಾ ಯಾರು? ರತನ್‌ಗೂ ಅವರಿಗೂ ಏನು ಸಂಬಂಧ