Sunday, 15th December 2024

Viral Video: ರಜೆಗಾಗಿ ಮಕ್ಕಳೆದುರೇ ಶಿಕ್ಷಕ-ಶಿಕ್ಷಕಿಯ ಕಾದಾಟ!

Viral Video

ಶಿಕ್ಷಕರು (Teachers Fight) ಮಕ್ಕಳಿಗೆ ಆದರ್ಶವಾಗಿರಬೇಕು. ಆದರೆ ಮಕ್ಕಳ ಎದುರೇ ಶಿಕ್ಷಕರು ಜಗಳ ಮಾಡಿಕೊಂಡರೆ ಹೇಗೆ? ಇದೀಗ ಇಂತಹ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ರಜೆಗಾಗಿ ಕಿರಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಬ್ಬರು ಮಕ್ಕಳು, ವಿದ್ಯಾರ್ಥಿಗಳ ಎದುರು ಜಗಳ ಮಾಡಿಕೊಂಡ ಘಟನೆ ನಡೆದಿದೆ. ಸುತ್ತಮುತ್ತ ತರಗತಿ ನಡೆಯುತ್ತಿದೆ ಎಂಬುದನ್ನೂ ಗಮನಿಸದೆ ಶಿಕ್ಷಕರು ಈ ರೀತಿ ಜಗಳ ಮಾಡಿರುವುದು ನೋಡಿ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ.

ರಜೆಯ ವಿಚಾರದಲ್ಲಿ ಶಿಕ್ಷಕರಿಬ್ಬರ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ಶಿಕ್ಷಕಿ ಪುರುಷ ಸಹೋದ್ಯೋಗಿಯ ಕಾಲರ್ ಹಿಡಿದು ಜಗಳ ಮಾಡುತ್ತಿರುವುದನ್ನು ಕಾಣಬಹುದು. ಉಳಿದ ಇಬ್ಬರು ಅವರಿಬ್ಬರನ್ನು ಬಿಡಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಶಿಕ್ಷಕಿಯು ಶಿಕ್ಷಕನ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದು, ಆತನ ಅಂಗಿಯನ್ನು ಹರಿದು ಹಾಕಿದ್ದಾಳೆ. ಹಲವಾರು ಮಂದೀ ಇವರನ್ನು ತಡೆಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

ಇವರಿಬ್ಬರ ಜಗಳ ಕೊನೆ ಕಾಣದೇ ಇದ್ದರೂ ಸಾಕಷ್ಟು ಹೊತ್ತು ಜಗಳ ಮಾಡಿದ ಬಳಿಕ ಮಹಿಳೆ ಕೊನೆಗೆ ಸಿಟ್ಟಿನಿಂದ ಅಲ್ಲಿಂದ ಹೋರಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವರು ನೀವು ಮಕ್ಕಳಿಗೆ ಮಾದರಿಯಾಗಿರಬೇಕು, ನೀವೇ ಹೀಗಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಒಬ್ಬರು ಕಾಮೆಂಟ್ ನಲ್ಲಿ ಶಿಕ್ಷಕರು ಮಕ್ಕಳಿಗೆ ಮಾದರಿ. ಅವರ ನಡುವಿನ ಜಗಳಗಳು ಮಕ್ಕಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತವೆ ಮತ್ತು ಅವರು ಅದೇ ರೀತಿಯಲ್ಲಿ ವರ್ತಿಸುವಂತೆ ಮಾಡಬಹುದು ಎಂದು ಹೇಳಿದ್ದಾರೆ.
ಇನ್ನೊಬ್ಬರು ಇದು “ಬಾಲಿಶ ನಡವಳಿಕೆ” ಎಂದು ಉಲ್ಲೇಖಿಸಿದ್ದಾರೆ.

Viral News: ಪರೀಕ್ಷೆ ಅರ್ಜಿಯಲ್ಲಿ ತಂದೆ ಇಮ್ರಾನ್ ಹಶ್ಮಿ, ತಾಯಿ ಸನ್ನಿ ಲಿಯೋನ್ ಎಂದು ಉಲ್ಲೇಖಿಸಿದ ವಿದ್ಯಾರ್ಥಿ!

ಈ ವಿಡಿಯೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಎರಡು ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಪ್ರತಿಕ್ರಿಯೆ ನೀಡಿರುವ ಒಬ್ಬ ವ್ಯಕ್ತಿ, ಶಿಕ್ಷಣದ ದೇವಸ್ಥಾನದಲ್ಲಿ ಇಂತಹ ಹಿಂಸಾಚಾರವನ್ನು ನಡೆಸುವುದು ಎಷ್ಟು ಸಮರ್ಥನೀಯ. ವಿಶೇಷವಾಗಿ ಮಹಿಳೆಯೊಂದಿಗೆ ಈ ವರ್ತನೆಯು ಅತ್ಯಂತ ಖಂಡನೀಯ ಎಂದುದ್ದರೆ.