Thursday, 21st November 2024

WhatsApp Update: ಕಡಿಮೆ ಬೆಳಕಲ್ಲೂ ಉತ್ತಮ ಗುಣಮಟ್ಟದ ವಿಡಿಯೊ ಕಾಲ್‌ ಮಾಡುವುದು ಹೇಗೆ? ಬಂದಿದೆ ಹೊಸ ಫೀಚರ್‌

WhatsApp Update

ನಿರಂತರವಾಗಿ ಅಪ್ಡೇಟ್ (WhatsApp Update) ಆಗುತ್ತಿರುವ ವಾಟ್ಸಾಪ್ ಇತ್ತೀಚೆಗೆ ಹಲವು ಹೊಸಹೊಸ ಫೀಚರ್‌ಗಳನ್ನು (New feature) ಹೊರತಂದಿದೆ. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತ, ತಮಗೆ ಇಷ್ಟವಾಗುವಂತಹ ಫೀಚರ್‌ಗಳನ್ನು ಬಳಸುತ್ತಾರೆ. ಇತ್ತೀಚೆಗೆ ಇದರಲ್ಲಿ ಸೇರ್ಪಡೆಯಾಗಿರುವ ಹೊಸ ಫೀಚರ್ ಎಂದರೆ ಕಡಿಮೆ ಬೆಳಕಿನ ವಿಡಿಯೋ ಕರೆ (low-light video calling) ಮತ್ತು ರಿಯಲ್ ಟೈಮ್ ವಿಡಿಯೋ ಮೆಸೇಜ್ (Real time video message) ಫೀಚರ್ಸ್.

ಕಡಿಮೆ ಬೆಳಕಿನ ವಿಡಿಯೋ ಕರೆ ಮತ್ತು ರಿಯಲ್ ಟೈಮ್ ವಿಡಿಯೋ ಮೆಸೇಜ್ ಫೀಚರ್ಸ್ ಅನ್ನು ಸಕ್ರಿಯಗೊಳಿಸಬೇಕಾದರೆ ಕೆಲವು ವಿಧಾನಗಳಿವೆ.

ಏನಿದು ಕಡಿಮೆ ಬೆಳಕಿನ ವಿಡಿಯೊ ಕರೆ ಮೋಡ್?

ಹೆಸರೇ ಸೂಚಿಸುವಂತೆ ಇದು ಕಡಿಮೆ ಬೆಳಕಿನಲ್ಲೂ ಉತ್ತಮ ಗುಣಮಟ್ಟದ ವಿಡಿಯೋ ಕರೆ ಮಾಡಲು ಅನುಕೂಲಕರವಾದ ಸೌಲಭ್ಯದ ಕಡಿಮೆ ಬೆಳಕಿನ ವಿಡಿಯೋ ಕರೆಯ ಮೋಡ್. ಇದು ಕಡಿಮೆ ಬೆಳಕಿದ್ದಾಗಲೂ ಕರೆಗಳ ವಿಡಿಯೋ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಹೆಚ್ಚುವರಿ ಬೆಳಕನ್ನು ವಿಡಿಯೋ ಕರೆ ಮಾಡುವವರ ಅಥವಾ ಸ್ವೀಕರಿಸುವವರ ಮುಖದ ಮೇಲೆ ಹರಿಯುವಂತೆ ಮಾಡಲಾಗುತ್ತದೆ.

ವ್ಯಾಟ್ಸಾಪ್‌ನಲ್ಲಿ ಕಡಿಮೆ ಬೆಳಕಿನ ಮೋಡ್ ಅನ್ನು ಪ್ರವೇಶಿಸಲು ಮೊದಲು ವಿಡಿಯೋ ಕರೆ ಮಾಡಿ ಬಳಿಕ ಬಲ ಮೂಲೆಯಲ್ಲಿರುವ ಹೊಸ “ಬಲ್ಬ್” ಮಾದರಿಯ ಲೋಗೋವನ್ನು ಕ್ಲಿಕ್ ಮಾಡಬೇಕು. ಅನಂತರ ಅದನ್ನು ವಿಸ್ತರಿಸಲು ಫ್ರೇಮ್ ಅನ್ನು ಟ್ಯಾಪ್ ಮಾಡಬೇಕು. ಆಗ ಇದು ಸಕ್ರಿಯಗೊಳ್ಳುತ್ತದೆ. ಒಂದು ವೇಳೆ ನೀವು ಇದನ್ನು ಆಫ್ ಮಾಡಲು ಬಯಸಿದರೆ ಬಲ್ಬ್ ಮಾದರಿಯ ಲೋಗೋ ಮೇಲೆ ಮತ್ತೆ ಕ್ಲಿಕ್ ಮಾಡಿ. ಆಗ ಇದು ಆಫ್ ಆಗುತ್ತದೆ.

ಯಾವುದರಲ್ಲಿ ಲಭ್ಯ?

ವ್ಯಾಟ್ಸಾಪ್‌ನ ಅಪ್ಲಿಕೇಶನ್‌ನ ಐಒಎಸ್ ಮತ್ತು ಆಂಡ್ರಾಯ್ಡ್ ಆವೃತ್ತಿಗಳಲ್ಲಿ ಕಡಿಮೆ ಬೆಳಕಿನ ಮೋಡ್ ಲಭ್ಯವಿದೆ. ವಿಂಡೋಸ್ ವ್ಯಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ಈ ವೈಶಿಷ್ಟ್ಯವು ಲಭ್ಯವಿಲ್ಲ. ವಿಂಡೋಸ್ ಆವೃತ್ತಿಯಲ್ಲೂ ಬ್ರೈಟ್‌ನೆಸ್ ಮಟ್ಟವನ್ನು ಹೆಚ್ಚಿಸಬಹುದು. ಪ್ರತಿ ವ್ಯಾಟ್ಸಾಪ್‌ ಕರೆಗೆ ಈ ವೈಶಿಷ್ಟ್ಯವನ್ನು ಆನ್ ಮಾಡಬೇಕಾಗುತ್ತದೆ. ಅದನ್ನು ಶಾಶ್ವತವಾಗಿ ಇರಿಸಿಕೊಳ್ಳಲು ಯಾವುದೇ ಆಯ್ಕೆಗಳಿಲ್ಲ.

WhatsApp Update

ರಿಯಲ್ ಟೈಮ್ ವಿಡಿಯೋ ಮೆಸೇಜ್

ವ್ಯಾಟ್ಸಾಪ್‌ನ ಚಾಟಿಂಗ್, ವಾಯ್ಸ್ ಮೆಸೇಜ್ ಸೌಲಭ್ಯವನ್ನು ಬಹುತೇಕ ಎಲ್ಲರೂ ಬಳಕೆ ಮಾಡುತ್ತಾರೆ. ಅದೇ ರೀತಿ ರಿಯಲ್ ಟೈಮ್ ವಿಡಿಯೋ ಮೆಸೇಜ್ ಫೀಚರ್ ಕೂಡ ಈಗ ಲಭ್ಯವಿದೆ. ಇದರಲ್ಲಿ ವಾಯ್ಸ್ ಮೆಸೇಜ್‌ನಂತೆಯೇ ವಿಡಿಯೋ ಸಂದೇಶವನ್ನು ಮಾಡಿ ಕಳುಹಿಸಬಹುದು. 60 ಸೆಕೆಂಡ್ ವಿಡಿಯೋಗಳನ್ನು ಇದರಲ್ಲಿ ಕಳುಹಿಸಲು ಅವಕಾಶವಿದೆ. ಇದಕ್ಕಾಗಿ ವ್ಯಾಟ್ಸಾಪ್‌ನ ಚಾಟ್ ಬಾಕ್ಸ್ ಬಲ ಭಾಗದಲ್ಲಿ ಡಾಕ್ಯುಮೆಂಟ್ ಅಥವಾ ಫೈಲ್ ಅಟ್ಯಾಚ್‌ಮೆಂಟ್ ಆಯ್ಕೆ, ಪಾವತಿ ಆಯ್ಕೆ, ಕೆಮೆರಾ ಹಾಗೂ ವಾಯ್ಸ್ ರೆಕಾರ್ಡರ್ ಆಯ್ಕೆ ಲಭ್ಯವಿದೆ. ವಾಯ್ಸ್ ಮೆಸೇಜ್ ಮಾಡಲು ವಾಯ್ಸ್ ರೆಕಾರ್ಡರ್ ಪ್ರೆಸ್ ಮಾಡುತ್ತೇವೆ. ಅದೇ ರೀತಿಯಲ್ಲಿ ಚಾಟ್ ಬಾಕ್ಸ್ ಪಕ್ಕದಲ್ಲಿರುವ ಕೆಮೆರಾ ಬಟನ್ ಪ್ರೆಸ್ ಮಾಡಿದರೆ ಗರಿಷ್ಠ 60 ಸೆಕೆಂಡ್ ವಿಡಿಯೋ ರೆಕಾರ್ಡ್ ಮಾಡಿ ತಕ್ಷಣ ಸಂದೇಶವನ್ನು ಕಳುಹಿಸಬಹುದು.

Android Tips: ಆಂಡ್ರಾಯ್ಡ್ ಸ್ಮಾರ್ಟ್​​ಫೋನ್​ಗಳಲ್ಲಿ ಅಡಕವಾಗಿರುವ ಈ ಸೂಪರ್ ಹಿಡನ್ ಫೀಚರ್ ನಿಮಗೆ ಗೊತ್ತೇ?

ಈ ಫೀಚರ್ ಅನ್ನು 2023ರಲ್ಲೇ ಜಾರಿಗೆ ತಂದಿದ್ದರೂ ಯಾರೂ ಹೆಚ್ಚಾಗಿ ಬಳಕೆ ಮಾಡಿಲ್ಲ. ಯಾಕೆಂದರೆ ಹೆಚ್ಚಿನವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ವಾಯ್ಸ್ ಮೆಸೇಜ್‌ನಂತೆ ಇದು ಕೂಡ ಬಳಕೆಗೆ ಅತ್ಯಂತ ಸುಲಭವಾದ ಫೀಚರ್ ಆಗಿದೆ.