ನವದೆಹಲಿ: ಲೈಕ್ಸ್, ಶೇರ್‌ಗಾಗಿ ತಮ್ಮ ಕಂಟೆಂಟ್‌ಗಳಿಗೆ ಅಸಂಬದ್ಧ ಟೈಟಲ್, ಥಂಬ್‌ನೈಲ್ ಕೊಡುವ ಕ್ರಿಯೆಟರ್ಸ್‌ಗೆ ಯೂಟ್ಯೂಬ್ ಖಡಕ್ ಎಚ್ಚರಿಕೆ ಕೊಟ್ಟಿದೆ. ದಾರಿತಪ್ಪಿಸುವ ಥಮ್‌ನೇಲ್ ಮತ್ತು ಟೈಟಲ್‌ಗಳಿಂದ ಜನ ಬೇಸತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯೂಟ್ಯೂಬ್(YouTube)ಒಡೆತನದ ಗೂಗಲ್ ನಿಯಮ(Google regulation)ಗಳನ್ನು ಜಾರಿಗೊಳಿಸಲು ಮುಂದಾಗಿದೆ. ನಿಯಮಗಳನ್ನು ಪೂರೈಸಲು ವಿಫಲವಾಗುವ “ಅತಿರೇಕದ ಕ್ಲಿಕ್‌ಬೈಟ್ಸ್ʼ ಗಳ ವಿರುದ್ಧ ಕ್ರಮ ನಿಶ್ಚಿತ ಎಂದು ಎಚ್ಚರಿಕೆ ನೀಡಿದೆ.
ಥಂಬ್‌ನೇಲ್‌ನಲ್ಲಿ ಇರುವ ಮಾಹಿತಿಗಳು ಹಾಗೂ ಟೈಟಲ್‌ಗಳ ವಿವರ ಅದರ ಕಂಟೆಂಟ್‌ನಲ್ಲೂ ಇರಬೇಕು. ಕೇವಲ ಕ್ಲಿಕ್‌ಗಾಗಿ ಥಂಬ್‌ನೇಲ್‌ನಲ್ಲಿ ಆಕರ್ಷಕ ಟೈಟಲ್ ಹಾಗೂ ಫೋಟೋಗಳನ್ನು ಬಳಸಿದ್ದಲ್ಲಿ ಅದನ್ನು ಕ್ಲಿಕ್‌ಬೈಟ್ ಕಂಟೆಂಟ್ ಎಂದು ಯೂಟ್ಯೂಬ್ ಗಣನೆಗೆ ತೆಗೆದುಕೊಳ್ಳಲಿದ್ದು, ಅಂಥಾ ಕಂಟೆಂಟ್‌ಗಳು ಡಿಲೀಟ್ ಆಗಲಿದೆ. ಇಂಥ ಕಂಟೆಂಟ್‌ಗಳಲ್ಲಿ ಸಾಮಾನ್ಯವಾಗಿ ಸರಿಯಾದ ಮಾಹಿತಿಗಳೇ ಇರೋದಿಲ್ಲ ಎಂದು ಯೂಟ್ಯೂಬ್ ಪರಿಗಣಿಸಿದೆ. ಥಂಬ್‌ನೇಲ್‌ಗಳಲ್ಲಿ ಮ್ಯಾನಿಪ್ಯುಲೇಟೆಡ್ ಲೈನ್‌ಗಳನ್ನು ಹಾಕುವ ಅಭ್ಯಾಸವನ್ನು ಸಾವಿರಾರು ಯೂಟ್ಯೂಬರ್‌ಗಳು ಅನುಸರಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಇದು ಕೊನೆಗೊಳ್ಳಲಿದೆ.
ನಿಯಮವು ಆರಂಭದಲ್ಲಿ ಅನಗತ್ಯ ʼಬ್ರೇಕಿಂಗ್ ನ್ಯೂಸ್ʼ ಗಳನ್ನು ನಿಯಂತ್ರಿಸಲಿದೆ. ಕೆರಳಿಸುವಂಥ ಶೀರ್ಷಿಕೆ ಹಾಕಿ ಸಂಬಂಧವಿಲ್ಲದ ವಿಷಯವನ್ನು ಪ್ರಸ್ತುತಪಡಿಸಿದರೆ ಅದಕ್ಕೂ ಕಡಿವಾಣ ಬೀಳಲಿದೆ. ಉದಾಹರಣೆಗೆ, ವೀಕ್ಷಕರನ್ನು ಆಕರ್ಷಿಸಲು “ಅಧಿಕಾರದಿಂದ ಕೆಳಗಿಳಿದ ಪ್ರಧಾನಿ” ಎಂಬ ಮೋಸದ ಥಮ್‌ನೇಲ್ ಹಾಕಿದರೆ ಗೂಗಲ್ ಕೆಂಗಣ್ಣಿಗೆ ಗುರಿಯಾಗುವುದು ಖಚಿತ.
ದಿಢೀರ್ ನಿರ್ಧಾರಕ್ಕೆ ಕಾರಣವೇನು?
ಹೊಸ ಮಾರ್ಗಸೂಚಿಗಳನ್ನು ಪಾಲಿಸದ ಕಂಟೆಂಟ್‌ಗಳನ್ನು ಯಾವುದೇ ಸೂಚನೆ ಅಥವಾ ಸ್ಟ್ರೈಕ್ ತೋರಿಸದೇ ತೆಗೆದು ಹಾಕಲು ಯೂಟ್ಯೂಬ್ ಯೋಜನೆ ರೂಪಿಸಿದೆ. ಈ ಮೂಲಕ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೊಸ ನಿಯಮಕ್ಕೆ ಮೊದಲೇ ಹೊಂದಿಕೊಳ್ಳುವಂತೆ ಕೋರಿಕೊಂಡಿದೆ. ಮುಂದುವರಿದು, ಅಸ್ತಿತ್ವದಲ್ಲಿರುವ ವಿಷಯಕ್ಕಿಂತ ಹೊಸ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಮಾತ್ರ ಆದ್ಯತೆ ನೀಡಬೇಕು ಎಂದಿದೆ.
ತಪ್ಪು ಶೀರ್ಷಿಕೆಗಳು ವೀಕ್ಷಕರನ್ನು ಮೋಸ ಮಾಡಬಹುದು, ನಿರಾಶೆಗೊಳಿಸಬಹುದು ಅಥವಾ ದಾರಿ ತಪ್ಪಿಸಬಹುದು. ವೀಕ್ಷಕರು ಪ್ರಮುಖ ಅಥವಾ ಸಮಯೋಚಿತ ಮಾಹಿತಿಗಾಗಿ ಯೂಟ್ಯೂಬ್‌ಗೆ ಬರುವಾಗ ಇವೆಲ್ಲರೂ ಅಡಚಣೆ ಉಂಟು ಮಾಡುತ್ತಿದೆ. ಹೀಗಾಗಿ ನಿಯಮ ಬಿಗಿಗೊಳಿಸುತ್ತೇವೆ ಎಂದು ಗೂಗಲ್ ಇಂಡಿಯಾ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಉದಾಹರಣೆ, ʼಅನಿರೀಕ್ಷಿತ ರಾಜಕೀಯ ಬೆಳವಣಿಗೆʼ ಎಂದು ಥಮ್‌ನೇಲ್ ನೀಡಿ ಆ ವಿಡಿಯೊದಲ್ಲಿ ಯಾವುದೇ ರಾಜಕೀಯ ವರ್ತಮಾನವನ್ನು ಚರ್ಚೆ ಮಾಡದೇ ಹೋದರೆ ಅದು ನಿಯಮದ ಉಲ್ಲಂಘನೆ. ಅದೇ ರೀತಿ ʼಪ್ರಮುಖ ರಾಜಕೀಯ ಸುದ್ದಿಗಳುʼ ಎಂದು ಬರೆದು ಬೇರೆ ಯಾವುದೋ ಸಮಾಚಾರವನ್ನು ಹೇಳಲು ಪ್ರಯತ್ನಿಸಿದರೇ ಅದು ಕೂಡ ತಪ್ಪು ಎಂದು ಗೂಗಲ್ ಹೇಳಿದೆ. ವಿಡಿಯೊದ ಆಕರ್ಷಣೆಗೆ ನೀಡುವ ಥಮ್‌ನೇಲ್ ಹಾಗೂ ಅದರಲ್ಲಿರುವ ಕಂಟೆಂಟ್ ನಡುವೆ ಸಂಬಂಧವೇ ಇಲ್ಲದಿದ್ದರೆ ವಿಡಿಯೊ ಡಿಲೀಟ್ ಆಗುವುದು ಖಚಿತ.
ಸುದ್ದಿ ಅಥವಾ ಪ್ರಸ್ತುತ ಘಟನೆಗಳನ್ನು ಹೇಗೆ ವರ್ಗೀಕರಿಸಲಾಗುತ್ತದೆ ಎಂದು ಕಂಪನಿ ನಿರ್ದಿಷ್ಟಪಡಿಸಿಲ್ಲ. ಹೊಸ ನಿಯಮ ರಾಜಕೀಯ ಮತ್ತು ಸರ್ಕಾರದ ಸುತ್ತೊಲೆಗಳನ್ನು ಹೊರತುಪಡಿಸಿ ಕ್ರೀಡೆಯಂತಹ ವಿಶಾಲ ವ್ಯಾಪ್ತಿಯ ಕ್ಷೇತ್ರಗಳಿಗೆ ಅನ್ವಯವಾಗುತ್ತದೆಯೇ ಎಂಬುದನ್ನೂ ಹೇಳಿಲ್ಲ. ಥಮ್‌ನೇಲ್, ಟೈಟಲ್ ಮತ್ತು ವಿಡಿಯೊ ಕಂಟೆಂಟ್ ನಡುವಿನ ದೋಷ ಪತ್ತೆ ಮಾದರಿಯನ್ನೂ ವಿವರಿಸಲಾಗಿಲ್ಲ.
ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾಗುವ ವಿಡಿಯೊಗಳ ನಿಯಂತ್ರಣಕ್ಕೂ ಕ್ರಮ ಕೈಗೊಂಡಿದೆ. ಅದಕ್ಕಾಗಿ ಕ್ರಿಯೇಟಿವ್ ಆರ್ಟಿಸ್ಟ್ಸ್ ಏಜೆನ್ಸಿ (CAA) ಜತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಈ ಸಹಭಾಗಿತ್ವವು ಪ್ರಭಾವಿ ವ್ಯಕ್ತಿಗಳಿಗೆ ತಮ್ಮನ್ನೇ ಹೋಲುವ ಕೃತಕ ಬುದ್ಧಿಮತ್ತೆ ರಚಿಸಿದ ಕಂಟೆಂಟ್ ಗುರುತಿಸಲು ಮತ್ತು ನಿರ್ವಹಿಸಲು ನೆರವಾಗುತ್ತದೆ.
ಈ ಸುದ್ದಿಯನ್ನೂ ಓದಿ: ಗೂಗಲ್‌ಗೆ 750 ಕೋಟಿ ರೂ., ಮೆಟಾಗೆ 175 ಕೋಟಿ ರೂ ದಂಡ
ಹೊಸ ವಿಡಿಯೊಗಳ ಮೇಲಷ್ಟೇ ಕಡಿವಾಣ
ಹೊಸ ಮಾರ್ಗಸೂಚಿಗಳನ್ನು ಪಾಲಿಸದ ಕಂಟೆಂಟ್‌ಗಳನ್ನು ಯಾವುದೇ ಸೂಚನೆ ಅಥವಾ ಸ್ಟ್ರೈಕ್ ತೋರಿಸದೇ ತೆಗೆದು ಹಾಕಲು ಯೂಟ್ಯೂಬ್ ಯೋಜನೆ ರೂಪಿಸಿದೆ. ಈ ಮೂಲಕ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೊಸ ನಿಯಮಕ್ಕೆ ಮೊದಲೇ ಹೊಂದಿಕೊಳ್ಳುವಂತೆ ಕೋರಿಕೊಂಡಿದೆ. ಮುಂದುವರಿದು, ಅಸ್ತಿತ್ವದಲ್ಲಿರುವ ವಿಷಯಕ್ಕಿಂತ ಹೊಸ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಮಾತ್ರ ಆದ್ಯತೆ ನೀಡಬೇಕು ಎಂದಿದೆ. ಸದ್ಯಕ್ಕೆ ಹೊಸದಾಗಿ ಅಪ್ಲೋಡ್ ಆಗುವ ವಿಡಿಯೋಗಳ ಮೇಲಷ್ಟೇ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಪ್ಲೋಡ್ ಆಗಿರುವ ವಿಡಿಯೋಗಳ ಮೇಲಲ್ಲ.