ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Robbery Case: ಪವರ್‌ ಗ್ರಿಡ್‌ ಸಿಬ್ಬಂದಿಯ ಹಣೆಗೆ ಬಂದೂಕು ಇಟ್ಟು 25ದರೋಡೆಕೋರರಿಂದ ರಾಬರಿ!

ಜಾರ್ಖಂಡ್‌ನ ರಾಂಚಿಯ ನಾಮಕುಮ್‌ನ ವಿದ್ಯುತ್ ಗ್ರಿಡ್‌ನಲ್ಲಿ ಸೋಮವಾರ ರಾತ್ರಿ ದೊಡ್ಡ ಕಳ್ಳತನ ನಡೆದಿದೆ. ಸುಮಾರು 25 ಶಸ್ತ್ರಸಜ್ಜಿತ ದರೋಡೆಕೋರರು ರಾತ್ರಿಯ ಕರ್ತವ್ಯದಲ್ಲಿದ್ದ ಆಪರೇಟರ್‌ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು, ಸುಮಾರು ಎರಡು ಗಂಟೆಗಳಲ್ಲಿ 15-16 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

25 ಬಂದೂಕುಧಾರಿಗಳಿಂದ ಭಾರೀ ರಾಬರಿ!

Profile Sushmitha Jain Jul 17, 2025 10:50 AM

ರಾಂಚಿ: ಜಾರ್ಖಂಡ್‌ನ (Jharkhand) ರಾಂಚಿಯ (Ranchi) ನಾಮಕುಮ್‌ನ ವಿದ್ಯುತ್ ಗ್ರಿಡ್‌ನಲ್ಲಿ (Namkum Power Grid) ಸೋಮವಾರ ರಾತ್ರಿ ದೊಡ್ಡ ಕಳ್ಳತನ ನಡೆದಿದೆ. ಸುಮಾರು 25 ಶಸ್ತ್ರಸಜ್ಜಿತ ದರೋಡೆಕೋರರು (Armed Assailants) ರಾತ್ರಿಯ ಕರ್ತವ್ಯದಲ್ಲಿದ್ದ ಆಪರೇಟರ್‌ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು, ಸುಮಾರು ಎರಡು ಗಂಟೆಗಳಲ್ಲಿ 15-16 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಕೇಶ್ ರಂಜನ್ ಘಟನೆಯನ್ನು ದೃಢಪಡಿಸಿದ್ದಾರೆ. ದರೋಡೆಕೋರರು ನಾಮಕುಮ್‌ನ ಟ್ರಾನ್ಸ್‌ಮಿಷನ್ ಸೆಂಟ್ರಲ್ ಸ್ಟೋರ್‌ನ ನಾಲ್ಕು ಕೊಠಡಿಗಳನ್ನು ತೆರೆದು, ಎರಡು ಕೊಠಡಿಗಳಿಂದ ವಸ್ತುಗಳನ್ನು ಕದ್ದಿದ್ದಾರೆ. ಆತಂಕದ ವಿಚಾರ ಎಂದರೆ ದರೋಡೆಕೋರರು ವಿದ್ಯುತ್ ಲೈನ್‌ಗೆ ಸಂಪರ್ಕಿಸಿದ್ದ ಉಪಕರಣಗಳನ್ನುಕಡಿಯಲು ಯತ್ನಿಸಿದ್ದಾರೆ. ಆದರೆ, ಈ ಉಪಕರಣಗಳನ್ನು ಮುಟ್ಟಿದರೆ ಇಡೀ ನಗರದ ವಿದ್ಯುತ್ ವ್ಯವಸ್ಥೆಯ ಮೇಲೆ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದೆಂದು ಎಚ್ಚರಿಸಿದ್ದರು. ಇದರಿಂದ ದರೋಡೆಕೋರರು ಆ ಉಪಕರಣಗಳನ್ನು ಮುಟ್ಟದೆ ಬಿಟ್ಟಿದ್ದಾರೆ.

ಈ ಸುದ್ದಿಯನ್ನು ಓದಿ; Rupee Symbol: ರೂಪಾಯಿ ಚಿಹ್ನೆಯ ವಿನ್ಯಾಸಕಾರು ಯಾರು? ಒಬ್ಬರಿಗೆ ಖ್ಯಾತಿ, ಮತ್ತೊಬ್ಬರು ತೆರೆಮರೆಗೆ: ಇದು ಇಬ್ಬರು ವಾಸ್ತುಶಿಲ್ಪಿಗಳ ಕಥೆ

ಸ್ಥಳದಿಂದ ತಪ್ಪಿಸಿಕೊಳ್ಳುವ ಮುನ್ನ, ದರೋಡೆಕೋರರು ಸಿಬ್ಬಂದಿಗೆ 30 ನಿಮಿಷಗಳ ಕಾಲ ಪೊಲೀಸರಿಗೆ ದೂರು ನೀಡದಂತೆ ಗನ್‌ನಿಂದ ಬೆದರಿಸಿದ್ದಾರೆ. ಈ ಧಮ್ಕಿಯಿಂದ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ರಾಕೇಶ್ ರಂಜನ್, ನಾಮಕುಮ್ ಗ್ರಿಡ್ ಸುತ್ತಮುತ್ತ ಡ್ರಗ್ಸ್ ವ್ಯಸನಿಗಳು ಮತ್ತು ಮದ್ಯಪಾನ ಮಾಡುವವರ ಓಡಾಟದಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಘಟನೆಗಳನ್ನು ತಡೆಗಟ್ಟಲು ಸ್ಥಳೀಯಾಡಳಿತವು ತಕ್ಷಣ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದು, ಈ ಪ್ರಕರಣದಿಂದ ಸರ್ಕಾರಿ ಆಡಳಿತಕ್ಕೆ ಒಳಪಡುವ ವಿದ್ಯುತ್ ಗ್ರಿಡ್‌ನಂತಹ ಕಚೇರಿಯಲ್ಲಿ ಇರುವ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ದರೋಡೆಕೋರರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ.